ಕರ್ತವ್ಯ ನಿಷ್ಠೆ: ಅಪ್ಪ ಮೃತಪಟ್ಟರೂ ಬಜೆಟ್ ತಯಾರಿಸಿದ ಅಧಿಕಾರಿಗೆ ಸಲಾಂ
ತಂದೆ ಮೃತಪಟ್ಟರೂ ಒಂದು ನಿಮಿಷವೂ ಕದಲದೇ ತಮ್ಮ ಸರ್ಕಾರಿ ಜವಾಬ್ದಾರಿ ನಿಭಾಯಿಸಿದ ಕೇಂದ್ರದ ಅಧಿಕಾರಿ ಕುಲ್ದೀಪ್ ಕುಮಾರ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ನವದೆಹಲಿ[ಫೆ.01] ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ತಮ್ಮ 2ನೇ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. 2020ರ ಮೊದಲ ಬಜೆಟ್ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು ಬಜೆಟ್ ತಯಾರಿಕೆಯ ವೇಳೆಯೇ ದುರಂತವೊಂದು ಸಂಭವಿಸಿದ್ದರು, ಅದನ್ನು ಲೆಕ್ಕಿಸದೇ ಬಜೆಟ್ ಕಾರ್ಯದಲ್ಲಿ ಭಾಗಿಯಾದ ಅಧಿಕಾರಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.
ಕ್ಷಯ ರೋಗ ಸೋಲತ್ತೆ, ಇಂಡಿಯಾ ಗೆಲ್ಲುತ್ತೆ: ಕೊಟ್ರೆ ಇಂತಾ ಅನುದಾನ ಕೊಡಬೇಕಲ್ವಾ ಮತ್ತೆ!
ಸರ್ಕಾರಿ ಮುದ್ರಣಾಲಯದ ಉಪ ವ್ಯವಸ್ಥಾಪಕ ಕುಲ್ದೀಪ್ ಕುಮಾರ್ ಶರ್ಮಾ ಅವರು ಸೂಪರ್ ಸೀಕ್ರೇಟ್ ಬಜೆಟ್ ಪ್ರಿಂಟ್ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದರು. ಬಜೆಟ್ ಪ್ರಿಂಟ್ ಆಗುವ ವೇಳೆಯಲ್ಲಿಯೇ ಕುಲ್ದೀಪ್ ಕುಮಾರ್ ಶರ್ಮಾ ಅವರ ತಂದೆ ಮೃತ ಪಟ್ಟಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮನೆಗೆ ತೆರಳದೇ ತಮಗೆ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಮ್ಮ ಕೆಲಸದ ಬದ್ಧತೆಯನ್ನು ನಿಭಾಯಿಸಿದ್ದಾರೆ.
ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!
ಕುಲ್ದೀಪ್ ಅವರ ತಂದೆ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಕೊನೆಯುಸಿರೆಳೆದಿದ್ದರು. ಆಗಲೇ ಗೌಪ್ಯವಾಗಿ ಕೇಂದ್ರ ಬಜೆಟ್’ನ ಪ್ರತಿಗಳು ಪ್ರಿಂಟ್ ಆಗುತ್ತಿದ್ದವು. ಇಂತಹ ಸಂದರ್ಭದಲ್ಲೂ ಕುಲ್ದೀಪ್ ತಮ್ಮ ಕಾರ್ಯ ಬದ್ಧತೆಯನ್ನು ಮರೆದಿದ್ದಾರೆ ಎಂದು ಹಣಕಾಸು ಇಲಾಖೆ ಟ್ವೀಟ್ ಮಾಡಿದೆ.
ಕೇಂದ್ರ ಬಜೆಟ್ 2020ರ ಪ್ರತಿ ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...