ರಾಷ್ಟ್ರೀಯ ಪೌರತ್ವ ನೀತಿಗೆ ಬೆಂಬಲ ಸೂಚಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ| ಎನ್‌ಆರ್‌ಸಿ ಭಾರತದ ಸುಭದ್ರ ಭವಿಷ್ಯಕ್ಕಾಗಿ ಒಳ್ಳೆಯದು ಎಂದ ರಂಜನ್ ಗಗೋಯ್| ಎನ್‌ಆರ್‌ಸಿ ಭಾರತಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿ ಕೊಡಲಿದೆ ಎಂದ ಗಗೋಯ್| 'ತಾತ್ಕಾಲಿಕ ಅಡಚಣೆಗಳನ್ನು ಮೀರಿ ಎನ್‌ಆರ್‌ಸಿ ಭವಿಷ್ಯದಲ್ಲಿ ಭಾರತಕ್ಕೆ ಒಳ್ಳೆಯದನ್ನು ಮಾಡಲಿದೆ'| ಎನ್‌ಆರ್‌ಸಿ ಸುಭದ್ರ ಭವಿಷ್ಯಕ್ಕಾಗಿ ಮೂಲ ದಾಖಲೆಯಾಗಿ ಪರಿಣಮಿಸಲಿದೆ ಎಂದ ಗಗೋಯ್|

ನವದೆಹಲಿ(ನ.04): ರಾಷ್ಟ್ರೀಯ ಪೌರತ್ವ ನೀತಿ ಭವಿಷ್ಯದಲ್ಲಿ ಭಾರತಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿ ಕೊಡಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಹೇಳಿದ್ದಾರೆ.

ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಗಗೋಯ್, ಎನ್‌ಆರ್‌ಸಿ ಭಾರತದ ಭವಿಷ್ಯಕ್ಕೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೊಗೋಯ್ ನಿವೃತ್ತಿ ಮುನ್ನ ಅಯೋಧ್ಯೆ ಪ್ರಕರಣದ ತೀರ್ಪು ಹೊರ ಬೀಳದಿದ್ದರೆ?

Scroll to load tweet…

ಸಾಕಷ್ಟು ಟೀಕೆಗೆ ಗುರಿಯಾಗಿರುವ ಪೌರತ್ವ ನೋಂದಣಿ ಯೋಜನೆಯನ್ನು ಗಗೋಯ್ ಸಮರ್ಥಿಸಿಕೊಂಡಿದ್ದು, ತಾತ್ಕಾಲಿಕ ಅಡಚಣೆಗಳನ್ನು ಮೀರಿ ಎನ್‌ಆರ್‌ಸಿ ಭವಿಷ್ಯದಲ್ಲಿ ಭಾರತಕ್ಕೆ ಒಳ್ಳೆಯದನ್ನು ಮಾಡಲಿದೆ ಎಂದಿದ್ದಾರೆ.

ಈ ಕ್ಷಣಕ್ಕೆ ಎನ್‌ಆರ್‌ಸಿ ಉಪಯುಕ್ತವೆನಿಸದೇ ಇರಬಹುದು. ಪೌರತ್ವ ಪಟ್ಟಿಯಿಂದ 19 ಲಕ್ಷ ಅಥವಾ 40 ಲಕ್ಷ ಜನ ಹೊರಗಿದ್ದಾರೆಂಬುದು ಮುಖ್ಯವಲ್ಲ. ಆದರೆ ಎನ್‌ಆರ್‌ಸಿ ಸುಭದ್ರ ಭವಿಷ್ಯಕ್ಕಾಗಿ ಮೂಲ ದಾಖಲೆಯಾಗಿ ಪರಿಣಮಿಸಲಿದೆ ಎಂದು ಗಗೋಯ್ ಹೇಳಿದರು.

ಅಗತ್ಯ ಬಿದ್ದರೆ ನಾನೇ ಕಾಶ್ಮೀರಕ್ಕೆ ತೆರಳುವೆ: ಸಿಜೆಐ ಗೊಗೋಯ್

Scroll to load tweet…

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಟು ವಿಮರ್ಶೆ ಅಗತ್ಯ ಎಂದಿರುವ ರಂಜನ್ ಗಗೋಯ್, ಆದರೆ ಎನ್‌ಆರ್‌ಸಿ ವಿರೋಧಿಗಳು ಭಾರತದ ಭದ್ರತೆಯತ್ತಲೂ ಗಮನಹರಿಸುವುದು ಅವಶ್ಯ ಎಂದು ಸಲಹೆ ನೀಡಿದ್ದಾರೆ.

ಅಸ್ಸಾಂನಿಂದ NRC ಮುಖ್ಯಸ್ಥರ ದಿಢೀರ್ ಎತ್ತಂಗಡಿ: ಕಾರಣ ಕೇಳ್ಬೇಡಿ ಎಂದ ಸುಪ್ರೀಂ!