ಸಿಎಎ ಇಸ್ ಗುಡ್ ಎಂದ ಕಾಂಗ್ರೆಸ್ ನಾಯಕ: ಒಪ್ಪಿಕೊಳ್ಳಿ ಎಂದು ಜನತೆಗೆ ಕರೆ!

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಕಾಂಗ್ರೆಸ್ ನಾಯಕ| ಸಿಎಎ ಒಪ್ಪಿಕೊಳ್ಳುವಂತೆ ಜನತೆಗೆ ಕರೆ ನೀಡಿದ ಕೈ ನಾಯಕ| ಸಿಎಎ ಪರ ಧ್ವನಿ ಎತ್ತಿದ ಗೋವಾ ಕಾಂಗ್ರೆಸ್ ನಾಯಕ ಜಾನ್ ಫರ್ನಾಂಡೀಸ್| ಸಿಎಎ ವಿರೋಧಿಸಿ ನಡೆಯುತ್ತಿರುವ ಹೋರಾಟ ಅಪ್ರಸ್ತುತ ಎಂದ ಜಾನ್| ಸಂಸತ್ತು ಪಾಸು ಮಾಡಿದ ಕಾನೂನನ್ನು ಗೌರವಿಸಬೇಕು ಎಂದ GPCC ಮಾಜಿ ಅಧ್ಯಕ್ಷ| 

Goa Congress Leader John Fernandes Says People Should Accept CAA

ಪಣಜಿ(ಜ.10): ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಾಲ್ವರು ಗೋವಾ ನಾಯಕರು ಪಕ್ಷ ತ್ಯಜಿಸಿದ ಬೆನ್ನಲ್ಲೇ, ರಾಜ್ಯದ ಮತ್ತೋರ್ವ ಕಾಂಗ್ರೆಸ್ ನಾಯಕ ಸಿಎಎ ಬೆಂಬಲಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಉತ್ತಮ ಕಾಯ್ದೆಯಾಗಿದ್ದು, ಇದನ್ನು ಒಪ್ಪಿಕೊಳ್ಳುವ ಮೂಲಕ ಜನತೆ ಕೇಂದ್ರ ಸರ್ಕಾರವನ್ನು ಬೆಂಬಲಿಸಬೇಕು ಎಂದು ಗೋವಾ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಜಾನ್ ಫರ್ನಾಂಡೀಸ್ ಕರೆ ನೀಡಿದ್ದಾರೆ.

ಇದು ಮಮತೆಯ ತಿರುವು: ಸಿಎಎ ವಿರೋಧಿಗಳಿಂದ ದೂರದ ಕುರುಹು!

ಸಿಎಎ ವಿರೋಧಿಸಿ ನಡೆಯುತ್ತಿರುವ ಹೋರಾಟ ಅಪ್ರಸ್ತುತ ಎಂದಿರುವ ಜಾನ್ ಫರ್ನಾಂಡೀಸ್, ಸಂಸತ್ತು ಪಾಸು ಮಾಡಿದ ಕಾನೂನನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

ಸಿಎಎ ವಿರೋಧಿಸಿ ಜಾಮಿಯಾ ಮಿಲ್ಲಿಯಾ ವಿವಿ ಹಾಗೂ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಹೋರಾಟ ದುರದೃಷ್ಟ ಎಂದು ಜಾನ್ ಫರ್ನಾಂಡೀಸ್ ಅಭಿಪ್ರಾಯಪಟ್ಟಿದ್ದಾರೆ.

CAA ಪರ ಅಭಿಯಾನ: ಬಿಜೆಪಿಗೆ 52 ಲಕ್ಷ ಮಿಸ್ಡ್ ಕಾಲ್!

ಗೋವಾದ ಪ್ರದೇಶ ಕಾಂಗ್ರೆಸ್ ಸಮಿತಿ(GPCC) ಮಾಜಿ ಅಧ್ಯಕ್ಷರಾಗಿರುವ ಜಾನ್ ಫರ್ನಾಂಡೀಸ್, ಸಿಎಎ ಬೆಂಬಲಿಸಿ ಹೇಳಿಕೆ ನೀಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios