ವೈಜಾಗ್‌ನಲ್ಲಿ ಮಹಾ ದುರಂತಕ್ಕೆ ಕಾರಣವಾದ ಗ್ಯಾಸ್ ಎಷ್ಟು ಅಪಾಯಕಾರಿ, ಗೊತ್ತಾ?
ನಾವು ಬಳಸುವ ಬಹುತೇಕ ಪ್ಲಾಸ್ಟಿಕ್ ಉತ್ಪನ್ನಗಳು ಇದೇ ಪಾಲಿಸ್ಟಿರೀನ್ ಅನಿಲವನ್ನು ಬಳಸಿ ತಯಾರಾಗಿವೆ ಎಂಬುದು ನಿಮಗೆ ಗೊತ್ತಾ? ಇದು ಬಹಳ ಸುಲಭವಾಗಿ ಬೆಂಕಿಗೆ ಆಹ್ವಾನ ಕೊಡಬಲ್ಲಂಥ ಅನಿಲ. ಪ್ಲಾಸ್ಟಿಕ್, ಫೈಬರ್ ಗ್ಲಾಸ್, ರಬ್ಬರ್, ಲ್ಯಾಟೆಕ್ಸ್ ಉತ್ಪಾದನೆಗಳಲ್ಲಿ ಈ ಅನಿಲ ಬೇಕೇ ಬೇಕು. ಎಲ್‌ಜಿ ಪಾಲಿಮರ್ಸ್‌ನಲ್ಲಿ ಎಲೆಕ್ಟ್ರಿಕ್ ಫ್ಯಾನ್‌ಗಳ ಬ್ಲೇಡ್, ಕಪ್‌ಗಳು, ಗೃಹೋಪಯೋಗಿ ಪಾತ್ರೆಗಳು, ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಪಾಲಿಸ್ಟೀರೀನ್ ಅಥವಾ ಸ್ಟಿರೀನ್ ಎಂದು ಕರೆಯಲಾಗುವ ವಿಷಾನಿಲ ವಿಶಾಖಪಟ್ಟಣದಲ್ಲಿ ಘೋರ ದುರಂತಕ್ಕೆ ಕಾರಣವಾಗಿದೆ. ಈ ಅನಿಲವನ್ನು ತಯಾರಿಸುತ್ತಿರುವ ಕಂಪನಿ ಎಲ್‌ಜಿ ಪಾಲಿಮರ್ಸ್. ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನಲ್ಲಿ 1961ರಲ್ಲಿ ಸ್ಥಾಪನೆಯಾದ ಈ ಫ್ಯಾಕ್ಟರಿಯನ್ನು 1978ರಲ್ಲಿ ಯುಬಿ ಗ್ರೂಪ್, ನಂತರ 1991ರಲ್ಲಿ ದಕ್ಷಿಣ ಕೊರಿಯಾದ ಎಲ್‌ಜಿ ಕೆಮಿಕಲ್ಸ್ ಕಂಪನಿ ಖರೀದಿಸಿವೆ, ಈಗ ಅದು ಎಲ್‌ಜಿ ಪಾಲಿಮರ್ಸ್ ಎಂಬ ಹೆಸರಿನಿಂದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಾದ ಪಾಲಿಸ್ಟಿರೀನ್ ಅನಿಲವನ್ನು ಉತ್ಪಾದಿಸಿ ನೀಡುತ್ತದೆ. ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ಫ್ಯಾಕ್ಟರಿಯ ಪ್ಲಾಂಟ್‌ಗಳಲ್ಲಿ ತನ್ನಿಂದ ತಾನಾಗಿಯೇ ನಡೆದ ಕೆಮಿಕಲ್ ಪ್ರಕ್ರಿಯೆಯಿಂದಾಗಿ ಈ ಅನಿಲ ಪರಿವರ್ತನೆಯಾಗಿದೆ. ಅಲ್ಲಿನ ಸೆಖೆಯ ವಾತಾವರಣದಿಂದಾಗಿ ನಡೆದಿದೆ ಈ ಕೆಮಿಕಲ್ ಬದಲಾವಣೆ. ಲಾಕ್‌ಡೌನ್ ನಂತರ ಫ್ಯಾಕ್ಟರಿ ತೆರೆಯುವಾಗ ಅಜಾಗರೂಕತೆ ತೋರಿಸಿದ್ದರಿಂದ ಈ ಲೀಕೇಜ್ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಫ್ಯಾಕ್ಟರಿಯಲ್ಲಿ ಈ ಬಗ್ಗೆ ಸಾಕಷ್ಟು ಸೇಫ್ಟಿ ವ್ಯವಸ್ಥೆ ಇರಲಿಲ್ಲ ಅಂತಲೂ ಹೇಳಲಾಗ್ತಿದೆ.
ಈ ಕೆಮಿಕಲ್ ಎಷ್ಟು ಅಪಾಯಕಾರಿ ಅಂತ ಈಗ ಗೊತ್ತಾಗುತ್ತಿದೆ. ಗೋಪಾಲಪಟ್ಟಣಂನಲ್ಲಿರುವ ಫ್ಯಾಕ್ಟರಿಯ ಸುತ್ತಮುತ್ತಲಿನ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಾಳಿಯಲ್ಲಿ ಈ ಅನಿಲ ಹರಡಿದ್ದು, ಈ ಪರಿಸರದಲ್ಲಿರುವ ಸಾವಿರಾರು ಮಂದಿ ಪ್ರಜ್ಞೆ ತಪ್ಪಿದ್ದಾರೆ ಅಥವಾ ಮೂರ್ಛೆ ಹೋಗಿದ್ದಾರೆ. ಕೆಲವರು ದಾರಿಯಲ್ಲೇ ಬಿದ್ದಿದ್ದರೆ, ಇನ್ನು ಕೆಲವರು ವಿಷಗಾಳಿ ಸೇವಿಸಿದ್ದರೂ ಹೇಗೋ ತೂರಾಡಿಕೊಂಡು ಬಂದು ಇತರರ ಸಹಾಯ ಬೇಡಿದ್ದಾರೆ. ಇದನ್ನು ಆಳವಾಗಿ ಉಸಿರಾಡಿದರೆ ಇದು ಮನುಷ್ಯನ ದೇಹದ ನರಗಳಲ್ಲಿ ರಕ್ತಸಂಚಲನೆಯನ್ನು ತಡೆದು, ಆತ ಮೂರ್ಛೆಗೆ ಹೋಗುವಂತೆ ಮಾಡುತ್ತದೆ. ಮೆದುಳಿಗೆ ರಕ್ತಸಂಚಾರ ನಿಲ್ಲುತ್ತದೆ. ಹೀಗಾಗಿ ಇದನ್ನು ನ್ಯೂರೋ ಟಾಕ್ಸಿನ್ ಎನ್ನಲಾಗುತ್ತದೆ. ಸೇವಿಸಿದ ಅನಿಲದ ಪ್ರಮಾಣ ಹೆಚ್ಚಿದ್ದರೆ ಕೂಡಲೇ ಸಾವು ಸಂಭವಿಸಬಹುದು. ಇತರರಿಗೆ ಸ್ವಲ್ಪ ನಿಧಾನವಾಗಿ ಸಾವು ಬರಬಹುದು. ಆದರೆ ಯಾವು ಮಾಸ್ಕ್ ಕೂಡ ಈ ಅನಿಲದ ದುಷ್ಪ್ರಭಾವ ತಡೆಯಲು ಸಾಧ್ಯವಿಲ್ಲ ಅನ್ನುತ್ತಾರೆ ಅಧಿಕಾರಿಗಳು.
ನಾವು ಬಳಸುವ ಬಹುತೇಕ ಪ್ಲಾಸ್ಟಿಕ್ ಉತ್ಪನ್ನಗಳು ಇದೇ ಪಾಲಿಸ್ಟಿರೀನ್ ಅನಿಲವನ್ನು ಬಳಸಿ ತಯಾರಾಗಿವೆ ಎಂಬುದು ನಿಮಗೆ ಗೊತ್ತಾ? ಇದು ಬಹಳ ಸುಲಭವಾಗಿ ಬೆಂಕಿಗೆ ಆಹ್ವಾನ ಕೊಡಬಲ್ಲಂಥ ಅನಿಲ. ಪ್ಲಾಸ್ಟಿಕ್, ಫೈಬರ್ ಗ್ಲಾಸ್, ರಬ್ಬರ್, ಲ್ಯಾಟೆಕ್ಸ್ ಉತ್ಪಾದನೆಗಳಲ್ಲಿ ಈ ಅನಿಲ ಬೇಕೇ ಬೇಕು. ಎಲ್‌ಜಿ ಪಾಲಿಮರ್ಸ್‌ನಲ್ಲಿ ಎಲೆಕ್ಟ್ರಿಕ್ ಫ್ಯಾನ್‌ಗಳ ಬ್ಲೇಡ್, ಕಪ್‌ಗಳು, ಗೃಹೋಪಯೋಗಿ ಪಾತ್ರೆಗಳು, ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ನಾವು ನೀವು ಕಾಫಿ ಟೀ ಸೇವಿಸುವ ಪೇಪರ್ ಕಪ್‌ಗಳನ್ನು ತಯಾರಿಸಲು ಈ ಸ್ಟಿರೀನ್ ಬಳಸಲಾಗುತ್ತದೆ. ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಯಾವುದೇ ವಸ್ತು ಪ್ಲಾಸ್ಟಿಕ್ ಪ್ಯಾಕೇಜ್‌ನಲ್ಲಿ ಬಂದರೆ, ಆ ಪ್ಲಾಸ್ಟಿಕ್ ಸ್ಟಿರೀನ್‌ನಿಂದ ಮಾಡಲ್ಪಟ್ಟಿದೆ ಎಂದೇ ಅರ್ಥ. ಚೀನಾದಿಂದ, ದಕ್ಷಿಣ ಕೊರಿಯಾದಿಂದ ಬರುವ ಅಗ್ಗದ ಬಣ್ಣಬಣ್ಣದ ಮಕ್ಕಳ ಆಟಿಕೆಗಳು ಇವೆಯಲ್ಲ, ಅವೆಲ್ಲವೂ ಸ್ಟಿರೀನ್ ಗ್ಯಾಸ್ ಬಳಸಿಯೇ ಮಾಡಿದ್ದು. ಇನ್ಸುಲೇಶನ್ ಸಾಮಗ್ರಿಗಳಿಗೆ ಬಳಸುವ ಪ್ಲಾಸ್ಟಿಕ್ ಇತ್ಯಾದಿಗಳು ಇದರ ಉತ್ಪನ್ನ.
ವಿಷಾನಿಲ ಸೋರಿಕೆ, 8 ಸಾವು, 200ಕ್ಕೂ ಹೆಚ್ಚು ಮಂದಿ ಗಂಭೀರ!...
ವೈಜಾಗ್ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಗಮನಿಸಿದರೆ, ಮನುಷ್ಯರ ಜೊತೆಗೆ ದನ ಕರು ಮುಂತಾದ ಜಾನುವಾರುಗಳೂ ಪ್ರಜ್ಞೆ ತಪ್ಪಿ ಮೂರ್ಛೆ ಹೋಗಿರುವುದನ್ನು ಗಮನಿಸಬಹುದು. ಈ ಸ್ಟಿರೀನ್ ಅನಿಲ ಮನುಷ್ಯರಿಗಿಂತಲೂ ಅತಿ ಬೇಗನೆ ಹಾಗೂ ಅತ್ಯಧಿಕ ಹಾನಿ ಮಾಡುವುದು ಪ್ರಾಣಿಗಳಲ್ಲಿ. ಇವುಗಳ ಜೀವ ತೆಗೆಯಲು ಅಲ್ಪ ಪ್ರಮಾಣದ ಸ್ಟಿರೀನ್ ಗ್ಯಾಸ್ ಸಾಕು. ಹೀಗಾಗಿ ಇಲ್ಲಿ ಮನುಷ್ಯರಿಗಿಂತ ಹೆಚ್ಚು ಪ್ರಮಾಣದಲ್ಲಿ ಪ್ರಾಣಿ ಪಕ್ಷಿಗಳು ಸತ್ತುಬಿದ್ದಿವೆ.
ಸ್ಟಿರೀನ್ ಅನಿಲ ಮನುಷ್ಯರಲ್ಲಿ ಕ್ಯಾನ್ಸರ್ ಕೂಡ ಉಂಟುಮಾಡಬಹುದು ಎಂಬುದು ಅಧ್ಯಯನಗಳಿಂದ ಗೊತ್ತಾಗಿದೆ. ಹೀಗಾಗಿ ಇಂದು ಅನಿಲ ದುರಂತದಲ್ಲಿ ಬದುಕಿ ಉಳಿದವರು ಕೂಡ ಮುಂದೆ ಕ್ಯಾನ್ಸರ್‌ಗೆ ತುತ್ತಾಗುವ ಭೀತಿ ಇದ್ದೇ ಇದೆ. ಈ ಅನಿಲ ಮೆದುಳು, ಶ್ವಾಸಕೋಶ, ಹೃದಯದ ಮೇಲೆ ಮಾಡುವ ಅಪಾರ ಹಾನಿಯಿಂದ ಚೇತರಿಸಿಕೊಳ್ಳಲು ಮನುಷ್ಯ ತುಂಬಾ ಕಷ್ಟಪಡಬೇಕಾದೀತು.
ಉಸಿರಾಡೋ ಗಾಳಿಯೇ ವಿಷವಾದಾಗ: ವಿಷಾನಿಲ ಸೇವಿಸಿ ನರಳಾಡಿದ ಜನ! ...
ಈ ಸ್ಟಿರೀನ್ ಅನಿಲವನ್ನು ತೀರಾ ಅಲ್ಪ ಪ್ರಮಾಣದಲ್ಲಿ ಕೆಲವು ಆಹಾರ ಪದಾರ್ಥಗಳಿಗೂ ಬೆರೆಸುತ್ತಾರೆ! ಬೇಕರಿ ಉತ್ಪನ್ನಗಳು, ಶೀತಲೀಕರಿಸಿದ ಡೈರಿ ಉತ್ಪನ್ನಗಳು, ಕ್ಯಾಡಿಗಳು, ಪುಡ್ಡಿಂಗ್ಸ್ ಮುಂತಾದವುಗಳನ್ನು ಕೆಡದಂತೆ ಕಾಪಾಡುವ ಸಂದರ್ಭದಲ್ಲಿ ಈ ಅನಿಲವನ್ನು ಬಳಸಲಾಗುತ್ತದೆ. ಭಾರಿ ಕಂಪನಿಗಳ ಈ ಫುಡ್ ಉತ್ಪಾದನೆಯಲ್ಲಿ ಇದು ಬೆರೆತಿರುತ್ತದೆ ಎಂದು ಧಾರಾಳವಾಗಿ ಹೇಳಬಹುದು.