Asianet Suvarna News Asianet Suvarna News

ಬಿಸಿಯೂಟ ತಯಾರಿಕೆಗೆ ಕೆಬಿಸಿಯಲ್ಲಿ 1 ಕೋಟಿ!

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿಕೊಡುವ ಬಡ ಮಹಿಳೆಯೊಬ್ಬರು ಇದೀಗ ಕೆಬಿಸಿಯಲ್ಲಿ ಭರ್ಜರಿ 1 ಕೋಟಿ ರು. ಬಹುಮಾನ ಗೆಲ್ಲುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
 

Mid day meal cook is the second crorepati Of KBC
Author
Bengaluru, First Published Sep 17, 2019, 8:04 AM IST

ನವದೆಹಲಿ (ಸೆ.17): ಖ್ಯಾತ ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಹಿಂದಿ ಅವತರಣಿಕೆಯ ‘ಕೌನ್‌ ಬನೇಗಾ ಕರೋಡ್‌ಪತಿ’ ದೇಶದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಇದರಲ್ಲಿ ಸ್ಪರ್ಧಾಳುಗಳಾಗುವವರು ಪ್ರಚಲಿತ ವಿಷಯ ಸೇರಿದಂತೆ ಎಲ್ಲಾ ವಿಷಯಗಳ ಅಪಾರ ಜ್ಞಾನ ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರವೇ ಬಹುಮಾನ ಖಚಿತ. ಆದರೂ ಎಷ್ಟೋ ಮೇಧಾವಿಗಳು ಇದರಲ್ಲಿ ಬಹುಮಾನ ಗೆಲ್ಲವುದರಿಂದ ವಂಚಿತರಾಗುತ್ತಾರೆ. ಆದರೆ ಅಚ್ಚರಿಯ ಎಂಬಂತೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿಕೊಡುವ ಬಡ ಮಹಿಳೆಯೊಬ್ಬರು ಇದೀಗ ಕೆಬಿಸಿಯಲ್ಲಿ ಭರ್ಜರಿ 1 ಕೋಟಿ ರು. ಬಹುಮಾನ ಗೆಲ್ಲುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಅಷ್ಟೇ ಏಕೆ ಅವರೀಗ 7 ಕೋಟಿ ರು. ಬಹುಮಾನ ಗೆಲ್ಲಬಹುದಾದ ಮುಂದಿನ ಸುತ್ತನ್ನೂ ಪ್ರವೇಶಿಸಿದ್ದಾರೆ. ಹೀಗಾಗಿಯೇ ಬಬಿತಾ ತಾಡೆ ಎಂಬ ಮಹಿಳೆ ಇದೀಗ ಎಲ್ಲರ ಚರ್ಚೆಗೆ ಗ್ರಾಸವಾಗಿದ್ದಾರೆ. ಜೊತೆಗೆ ಮುಂದಿನ ಪ್ರಶ್ನೆಗೆ ಸರಿಯುತ್ತರ ನೀಡಿ ಬಬಿತಾ 7 ಕೋಟಿ ರು. ಬಹುಮಾನ ಗೆಲುತ್ತಾರಾ ಎಂಬ ಪ್ರಶ್ನೆಯೂ ಎಲ್ಲರನ್ನೂ ಕಾಡಿದೆ. ಇದೆಲ್ಲಕ್ಕಿಂತ ಹೆಚ್ಚಿನ ಬಬಿತಾರ ಜೀವನ ಪ್ರೀತಿ, ಅವರ ಕಷ್ಟದ ಜೀವನ ಎಲ್ಲರ ಮನಕಲುಕಿದೆ.

ಯಾರೀ ಬಬಿತಾ?:  ಬಬಿತಾ ತಾಡೆ ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಾರೆ. ಇವರು ತಯಾರಿಸುವ ಕಿಚಡಿ ಎಂದರೆ ಮಕ್ಕಳಿಗೆ ಬಹುಪ್ರೀತಿಯಂತೆ. ಹೀಗಾಗಿಯೇ ಇವರನ್ನು ಮಕ್ಕಳು ಕಿಚಡಿ ಆಂಟಿ ಎಂದೇ ಕರೆಯುತ್ತಾರಂತೆ. ಕುಟುಂಬ ನಿರ್ವಹಣೆಗಾಗಿ ಬಬಿತಾ ಮಾಸಿಕ ಕೇವಲ 1500 ರುಪಾಯಿಗೆ ಶಾಲೆಯಲ್ಲಿ ಆಹಾರ ತಯಾರಿಸುವ ಕೆಲಸ ಮಾಡುತ್ತಾರೆ.

ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

ಇಂಥ ಕಷ್ಟನಷ್ಟಗಳ ನಡುವೆಯೇ ಅಪಾರ ಜ್ಞಾನಗಳಿಸಿರುವ ಬಬಿತಾ 15 ಪ್ರಶ್ನೆಗಳಿಗ ಉತ್ತರ ನೀಡುವ ಭರ್ಜರಿ 1 ಕೋಟಿ ಗೆದ್ದುಕೊಂಡಿದ್ದಾರೆ. ಈ ವೇಳೆ ಹಣದಿಂದ ಏನು ಮಾಡುತ್ತೀರಿ ಎಂದು ಬಚ್ಚನ್‌ ಪ್ರಶ್ನಿಸಿದ್ದಾರೆ. ಈ ವೇಳೆ ಮೊದಲಿಗೆ ಮೊಬೈಲ್‌ ಖರೀದಿಸುವೆ ಎಂದು ಬಬಿತಾ ಹೇಳಿದ್ದಾರೆ. ಅದೇಕೆ ಎಂಬ ಬಚ್ಚನ್‌ ಮರುಪ್ರಶ್ನೆಗೆ, ಹಾಲಿ ನಮ್ಮ ಕುಟುಂಬ ಬಳಿ ಒಂದು ಮೊಬೈಲ್‌ ಮಾತ್ರ ಇದೆ. ಎಲ್ಲರೂ ಅದನ್ನೇ ಬಳಸುತ್ತೇವೆ. ಹೀಗಾಗಿ ನನಗೆಂದು ಒಂದು ಮೊಬೈಲ್‌ ಖರೀದಿಸುವ ಆಸೆ ಇದೆ ಎಂದು ಬಬಿತಾ ತಮ್ಮ ಮನದಾಸೆ ಹೇಳಿಕೊಂಡಿದ್ದಾರೆ.

ಆಕೆಯ ಈ ಕಥೆಯನ್ನು ಕೇಳಿ ಬಚ್ಚನ್‌ ಅವರು ಭಾವುಕರಾಗಿ ಕಾರ್ಯಕ್ರಮದ ನಡುವೆಯೇ ಮೊಬೈಲ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

Follow Us:
Download App:
  • android
  • ios