ಕಾಂಗರೂ ನಾಡಿನಲ್ಲಿ ಹಿಂದೆಂದೂ ಕಾಣದಂತಹ ಭೀಕರ ಕಾಡ್ಗಿಚ್ಚು ಹರಡಿದೆ. ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಅಸಂಖ್ಯಾತ ಪ್ರಾಣಿ- ಒಕ್ಷಿಗಳು ಬೆಂಕಿಗಾಹುತಿಯಾಗುತ್ತಿವೆ. ಅವುಗಳ ರೋದನ ಮುಗಿಲು ಮುಟ್ಟಿದೆ. ಪ್ರಕೃತಿ ವಿಕೋಪಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಅರಣ್ಯ ರಕ್ಷಣೆಗೆ ಅಲ್ಲಿನ ಜನರು ಧಾವಿಸುತ್ತಿದ್ದಾರೆ. ಸಹಾಯಕ್ಕೆ ನಿಲ್ಲುತ್ತಿದ್ದಾರೆ.  

ಬಾಲಿವುಡ್ ನಟ ಕ್ರಿಸ್ ಹೆಮ್ಸ್ವರ್ತ್ ಸಹಾಯಕ್ಕೆ ಮುಂದಾಗಿದ್ದಾರೆ. ಕಾಡ್ಗಿಚ್ಚು ನಿಯಂತ್ರಣಕ್ಕೆ 10 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಜೊತೆಗೆ ಬೇರೆಯವರಿಗೂ ಕೈ ಜೋಡಿಸುವಂತೆ ಕೇಳಿಕೊಂಡಿದ್ದಾರೆ. 

ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!

'ಹಾಯ್ ಗೆಳೆಯರೇ , ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಅಸ್ಟ್ರೇಲಿಯಾದ ಕಾಡ್ಗಿಚ್ಚು ನಮ್ಮ ಕಾಡನ್ನು ನಾಶ ಮಾಡಿದೆ. ಇದನ್ನು ನಿಯಂತ್ರಣಕ್ಕೆ ತರಲು ನಾವೆಲ್ಲರೂ ಆರ್ಥಿಕವಾಗಿ ಕೈ ಜೋಡಿಸಬೇಕಿದೆ. ಈ ಹಣವು ಅಗ್ನಿಶಾಮಕ ದಳದವರಿಗೆ ತಲುಪುತ್ತದೆ. ಮನೆ ಕಳೆದುಕೊಂಡವರಿಗೆ ಹಾಗೂ ಪ್ರಾಣಪಾಯದಿಂದ ಪಾರಾದ ಪ್ರಾಣಿಗಳಿಗೆ ಸಹಾಯವಾಗುತ್ತದೆ ' ಎಂದು ಹೇಳಿದ್ದಾರೆ.

ಇದಕ್ಕೆ ಭಾರತೀಯ ಕ್ರಿಕೆಟ್ ಆಟಗಾರ ಯುವರಾಜ್‌ ಸಿಂಗ್ ಭೀಕರ ಘಟನೆ ಬಗ್ಗೆ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಬೇಗ ನಿಯಂತ್ರಣಕ್ಕೆ ಬರಲಿ ಎಂದು ಪ್ರಾರ್ಥಿಸಿದ್ದಾರೆ.

Scroll to load tweet…