ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಅಳಿಯ| ಇಂಗ್ಲೆಂಡ್ ಹಣಕಾಸು ಸಚಿವರಾಗಿ ಇನ್ಫಿ ಮೂರ್ತಿ ಅಳಿಯ| ರಿಷಿ ಸುನಕ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿದ ಇಂಗ್ಲೆಂಡ್ ಪ್ರಧಾನಿ ಬೊರಿಸ್ ಜಾನ್ಸನ್| ಹಣಕಾಸು ಸಚಿವ ಸ್ಥಾನಕ್ಕೆ ಸಾಜೀದ್ ಜಾವೇದ್ ರಾಜೀನಾಮೆ ಹಿನ್ನೆಲೆ| ರಿಷಿ ಸುನಕ್ ಇದೀಗ ಇಂಗ್ಲೆಂಡ್ ನೂತನ ಹಣಕಾಸು ಸಚಿವ| ಮೂರ್ತಿ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿರುವ ರಿಷಿ ಸುನಕ್|
ಲಂಡನ್(ಫೆ.13): ಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್, ಇಂಗ್ಲೆಂಡ್’ನ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದಾರೆ.
ರಿಷಿ ಸುನಕ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿ ಇಂಗ್ಲೆಂಡ್ ಪ್ರಧಾನಿ ಬೊರಿಸ್ ಜಾನ್ಸನ್ ಆದೇಶ ಹೊರಡಿಸಿದ್ದಾರೆ. ಈ ಮೊದಲು ರಿಷಿ ಲಂಡನ್ ಸರ್ಕಾರದ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಬ್ರಿಟನ್ ಪ್ರಧಾನಿ ಸಂಪುಟಕ್ಕೆ ನಾರಾಯಣ್ ಮೂರ್ತಿ ಅಳಿಯ!
ಈ ಮೊದಲು ಹಣಕಾಸು ಸಚಿವರಾಗಿದ್ದ ಸಾಜೀದ್ ಜಾವೇದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ರಿಷಿ ಸುನಕ್ ಅವರನ್ನು ನೂತನ ಹಣಕಾಸು ಸಚಿವರನ್ನಾಗಿ ನೇಮಿಸಲಾಗಿದೆ.
39 ವರ್ಷದ ರಿಷಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದು, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.
ಬ್ರಿಟನ್ ಸಂಪುಟದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿಗೆ ಉನ್ನತ ಸಚಿವ ಹುದ್ದೆ?
ರಿಷಿ ಸುನಕ್ ಮೂಲತಃ ಪಂಜಾಬ್’ನವರಾಗಿದ್ದರೂ, ನಾರಾಯಣ್ ಮೂರ್ತಿ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗುವ ಮೂಲಕ ಕರ್ನಾಟಕದ ಅಳಿಯ ಎಂಬುದು ಹೆಮ್ಮೆಯ ವಿಷಯ.
"
