ಕರ್ನಾಟಕ ಬಜೆಟ್ 2020: ಬೆಂಗಳೂರಿಗೆ ಬಂಪರ್ ಕೊಡುಗೆ ಕೊಟ್ಟ ಬಿಎಸ್‌ವೈ

2020-21ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

Karnataka Budget 2020 BSY Anounces Rs 8772 crore To Bengaluru

ಬೆಂಗಳೂರು, (ಮಾ. 05): 2020-21ಸಾಲಿನ ಬಜೆಟ್‌ನಲ್ಲಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರು ನಗರದ ಅಭಿವೃದ್ಧಿಗೆ ಒಟ್ಟು 8772 ಕೋಟಿ ರೂ. ಘೋಷಿಸಿದ್ದಾರೆ.

ಕರ್ನಾಟಕ ಬಜೆಟ್ 2020: ಪೆಟ್ರೋಲ್, ಡೀಸೆಲ್ ದರ ಏರಿಕೆ...!

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನ ತಮ್ಮಲ್ಲಿಯೇ ಉಳಿಸಿಕೊಂಡಿರುವ ಯಡಿಯೂರಪ್ಪ ಅವರು ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.

Karnataka Budget 2020 Live | ರೇಷ್ಮೆ ಬೆಳೆಗಾರರಿಗೆ ಗುಡ್ ನ್ಯೂಸ್!

ಬೆಂಗಳೂರಿಗೆ ಸಿಕ್ಕಿದ್ದೇನು..? 
* ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ 
* ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ 
* ನವನಗರೋತ್ಥಾನ ಯೋಜನೆಗೆ 317 ಕೋಟಿ 
* ಮನೆಗಳಿಗೆ ನೀರು ನುಗ್ಗುವುದು ತಪ್ಪಿಸಲು 200 ಕೋಟಿ
* ಬೆಂಗಳೂರಿನ ಸುತ್ತ ಹಳ್ಳಿಗಳ ರಸ್ತೆ ದುರಸ್ಥಿಗೆ 500 ಕೋಟಿ 
* ವಾರ್ಷಿಕ 70 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ
* ಕಚೇರಿಗಳಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಾಣ
* ಬೆಂಗಳೂರಿನ ವಿವಿಧ ಭಾಗಗಳಲ್ಲಿ 4 ವಿದ್ಯುತ್ ಚಿತಾಗಾರ
* ಹೆಬ್ಬಾಳ ಮೂಲಕ ಏರ್ಪೋರ್ಟ್ ಗೆ ಮೆಟ್ರೋ 
* ಸಬ್ಅರ್ಬನ್ ರೈಲು ಯೋಜನೆಗೆ 500 ಕೋಟಿ 
* 1500 ಹೊಸ ಡೀಸೆಲ್ ಬಸ್ ಖರೀದಿಗೆ 600 ಕೋಟಿ
* 500 ಎಲೆಕ್ಟ್ರಿಕ್ ಬಸ್ ಖರೀದಿಗೆ 100 ಕೋಟಿ 
* ಮೆಟ್ರೋ ಫೀಡರ್ ಸಾರಿಗೆಗೆ 90 ಎಲೆಕ್ಟ್ರಿಕ್ ಬಸ್
* ಟ್ರಾಫಿಕ್ ಹೆಚ್ಚಿರುವ 12 ಏರಿಯಾ ಅಭಿವೃದ್ಧಿಗೆ 500 ಕೋಟಿ 
* ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ಅನುದಾನ
* ವಾಣಿಜ್ಯ ಪ್ರದೇಶದಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್

#Newsin100Seconds I ಕ್ಷಣದ ಪ್ರಮುಖ ಸುದ್ದಿಗಳು

"

Latest Videos
Follow Us:
Download App:
  • android
  • ios