29 ವರ್ಷಗಳ ಕನಿಷ್ಠಕ್ಕೆ ಚೀನಾ ಜಿಡಿಪಿ ಕುಸಿತ!
29 ವರ್ಷಗಳ ಕನಿಷ್ಠಕ್ಕೆ ಚೀನಾ ಜಿಡಿಪಿ ಕುಸಿತ| ಶೇಕಡಾ 6.1ಕ್ಕೆ ಇಳಿಕೆ| ದೇಶೀಯವಾಗಿ ಬೇಡಿಕೆ ಕುಸಿತ
ಬೀಜಿಂಗ್[ಜ.18]: ಒಂದೆಡೆ ಭಾರತದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಕುಸಿಯುತ್ತಿರುವ ನಡುವೆಯೇ, ವಿಶ್ವದ 2ನೇ ಬೃಹತ್ ಆರ್ಥಿಕ ಶಕ್ತಿಯಾಗಿರುವ ಚೀನಾದ ಜಿಡಿಪಿ ದರ 2019ನೇ ಸಾಲಿನಲ್ಲಿ ಶೇ.6.1ಕ್ಕೆ ಜಾರಿದೆ. ಇದು 29 ವರ್ಷಗಳಲ್ಲೇ ಕನಿಷ್ಠ ಮಟ್ಟವಾಗಿರುವುದು ಚೀನಾದ ಚಿಂತೆಗೆ ಕಾರಣವಾಗಿದೆ.
ಏಕಾಏಕಿ 29 ವರ್ಷಗಳಷ್ಟು ಹಿಂದಕ್ಕೆ ಹೋದ ಚೀನಾ: ಡ್ರ್ಯಾಗನ್ ತಾಕತ್ತು ಇಷ್ಟೇನಾ?
ದೇಶೀಯವಾಗಿ ಬೇಡಿಕೆ ಕುಸಿತ ಹಾಗೂ ಅಮೆರಿಕ ಜತೆಗಿನ 18 ತಿಂಗಳ ಅವಧಿಯ ವ್ಯಾಪಾರ ಸಮರ ಇದಕ್ಕೆ ಭಾರಿ ಕೊಡುಗೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಕಳೆದ ಬುಧವಾರವಷ್ಟೇ ಈ ಸಮರಕ್ಕೆ ತೆರೆ ಬಿದ್ದಿರುವುದರಿಂದ ಜಿಡಿಪಿ ಏರಿಕೆಗೆ ಕೊಡುಗೆ ನೀಡಬಹುದು ಎಂದು ಹೇಳಲಾಗಿದೆ.
ಚೀನಾದ ಜಿಡಿಪಿ ಕುಸಿತ ಕಂಡಿದ್ದರೂ ಒಟ್ಟಾರೆ ಆರ್ಥಿಕ ಗಾತ್ರ 13.1 ಟ್ರಿಲಿಯನ್ ಡಾಲರ್‌ನಿಂದ 14.38 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ವೇತನದಲ್ಲಿ ನಂ 1: ಬೆಂಗಳೂರಿನಲ್ಲೇಕೆ ನೌಕರರಿಗೆ ಸಂಬಳ ಹೆಚ್ಚು?