ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್‌. ಶೆಟ್ಟಿ ಫಿಲ್ಮ್‌ ಸಿಟಿ ಸ್ಥಾಪನೆ!

ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್‌. ಶೆಟ್ಟಿ ಫಿಲ್ಮ್‌ ಸಿಟಿ ಸ್ಥಾಪನೆ| ಫಿಲ್ಮ್‌ ಸಿಟಿಗೆ ಜಾಗ ನೀಡುವುದಾಗಿ ಆಫರ್‌ ಬಂದಿವೆ

Businessman BR Shetty plans to open 3000 acre film city in Kashmir

ದುಬೈ[ಸೆ.19]: ಜಮ್ಮು- ಕಾಶ್ಮೀರದಲ್ಲಿ ಅನ್ಯ ರಾಜ್ಯದವರು ಆಸ್ತಿ ಖರೀದಿಸಲು ಇದ್ದ ನಿಷೇಧ ತೆರವುಗೊಳಿಸಿರುವ ಹಿನ್ನೆಲ್ಲೆಯಲ್ಲಿ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್‌. ಶೆಟ್ಟಿಜಮ್ಮು- ಕಾಶ್ಮೀರದಲ್ಲಿ ಬೃಹತ್‌ ಫಿಲ್ಮ್‌ ಸಿಟಿಯೊಂದನ್ನು ಆರಂಭಿಸಲು ಉದ್ದೇಶಿಸಿದ್ದಾರೆ.

ಅರಬ್‌ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಬಿ.ಆರ್‌.ಶೆಟ್ಟಿ, ‘ಜಮ್ಮು- ಕಾಶ್ಮೀರ ಅತ್ಯಂತ ರಮಣೀಯ ಸ್ಥಳವಾಗಿದ್ದು, ನಾನು ಅಲ್ಲಿ ಫಿಲ್ಮ್‌ ಸಿಟಿಯೊಂದನ್ನು ಆರಂಭಿಸಲಿದ್ದೇನೆ. ಜನರು ಅಲ್ಲಿಗೆ ಬಂದು ಚಿತ್ರಗಳನ್ನು ಚಿತ್ರೀಕರಿಸಬಹುದು. ನನಗೆ ಈಗಾಗಲೇ ಜಮ್ಮು- ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಸುಮಾರು 3,000 ಎಕರೆಯಷ್ಟುಜಾಗ ನೀಡುವುದಾಗಿ ಆಫರ್‌ಗಳು ಬಂದಿವೆ’ ಎಂದು ಹೇಳಿದ್ದಾರೆ.

35ಎ ರದ್ದು ಬೆನ್ನಲ್ಲೇ, ಕಾಶ್ಮೀರದಲ್ಲಿ ಮೊದಲ ಕೈಗಾರಿಕೆ ಸ್ಥಾಪನೆಗೆ ಆಫರ್‌!

ಆಗಸ್ಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಮ್ಮು- ಕಾಶ್ಮೀರದಲ್ಲಿ 7 ಸಾವಿರ ಕೋಟಿ ರು. ಹೂಡಿಕೆ ಮಾಡುವುದಾಗಿ ಬಿ.ಆರ್‌. ಶೆಟ್ಟಿಪ್ರಕಟಿಸಿದ್ದರು.

ಸಂವಿಧಾನದ 35ಎ ವಿಧಿ ಕಾಶ್ಮೀರದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಿತ್ತು. ಕಾಶ್ಮಿರದ ನಿವಾಸಿಗಳನ್ನು ಹೊರತುಪಡಿಸಿ ಅನ್ಯ ರಾಜ್ಯದವರು ಆಸ್ತಿಗಳನ್ನು ಖರೀದಿಸಲು ಅವಕಾಶ ಇರಲಿಲ್ಲ. ಆದರೆ, ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿರುವುದರಿಂದ ಕಾಶ್ಮೀರದಲ್ಲಿ ಹೂಡಿಕೆ ಮತ್ತು ಆಸ್ತಿ ಖರೀದಿಗೆ ಅವಕಾಶ ಇದೆ. ಜಮ್ಮು- ಕಾಶ್ಮೀರದಲ್ಲಿ ರೆಸಾರ್ಟ್‌ ಆರಂಭಿಸುವ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಘೋಷಣೆ ಮಾಡಿವೆ.

ಕಾಶ್ಮೀರದಲ್ಲಿ ನಿರ್ಬಂಧ ವಾಪಸ್‌; ಶ್ರೀನಗರ ಡಿಸಿ ಏನ್ ಹೇಳ್ತಾರೆ ಓದಿ!

Latest Videos
Follow Us:
Download App:
  • android
  • ios