Asianet Suvarna News Asianet Suvarna News

ಅಕ್ರಮ ಕಟ್ಟಡ ತೆರವು ಮಾಡೋಕೆ ಬಿಬಿಎಂಪಿ ಹತ್ರ ಹಣ ಇಲ್ವಂತೆ..!

ಬಿಬಿಎಂಪಿ ವ್ಯಾಪ್ತಿಯ 8 ವಲಯದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿದ 980 ಕಟ್ಟಡಗಳಿವೆ. ಆದರೆ, ಈ ಅಕ್ರಮ ಕಟ್ಟಡ ತೆರವುಗೊಳಿಸುವಷ್ಟು ಹಣವೂ ಪಾಲಿಕೆ ಬಳಿಯಿಲ್ಲ.- ಇದು ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ ಮುಂದೆಟ್ಟಿರುವ ಮಾಹಿತಿ.
 

dont have money for clearance of illegal buildings says bbmp
Author
Bangalore, First Published Nov 13, 2019, 9:54 AM IST

ಬೆಂಗಳೂರು(ನ.13): ಬಿಬಿಎಂಪಿ ವ್ಯಾಪ್ತಿಯ 8 ವಲಯದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿದ 980 ಕಟ್ಟಡಗಳಿವೆ. ಆದರೆ, ಈ ಅಕ್ರಮ ಕಟ್ಟಡ ತೆರವುಗೊಳಿಸುವಷ್ಟು ಹಣವೂ ಪಾಲಿಕೆ ಬಳಿಯಿಲ್ಲ.- ಇದು ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ ಮುಂದೆಟ್ಟಿರುವ ಮಾಹಿತಿ.

ಹೌದು, ನಗರದಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಹೈಕೋರ್ಟ್ ಕಳೆದ ಸೆಪ್ಟಂಬರ್‌ನಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಈ ಅಚ್ಚರಿಯ ಮಾಹಿತಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಗ್ಯಾಸ್‌ ಮೇಲೆ ಹಾಲಿಟ್ಟು ಮಲಗಿದ ದಂಪತಿ, ನಿದ್ರಾಸ್ಥಿತಿಯಲ್ಲೇ ಸಾವು..!

ಅಕ್ರಮ ಕಟ್ಟಡಗಳ ಕುರಿತ ಸುದ್ದಿ ಪ್ರಕಟಿಸುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿ ಅಕ್ರಮವಾಗಿ, ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಕುರಿತು ಸರ್ವೇ ನಡೆಸಿದ್ದರು. ಹೈಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯನ್ನು ಬಿಡುಗಡೆ ಮಾಡಿತು. 980 ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳಿವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ. ಎಚ್.ಅನಿಲ್‌ಕುಮಾರ್, ಹೈಕೋರ್ಟ್‌ಗೆ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡದ ಬಗ್ಗೆ ಮಾಹಿತಿ ನೀಡಿದ್ದೇವೆ. ನಿರ್ಮಾಣ ಹಂತ ದಲ್ಲಿ ನಕ್ಷೆ ಉಲ್ಲಂಘಿಸಲಾಗಿದೆಯೇ, ನಕ್ಷೆಯೇ ಪಡೆ ಯದೆ ಕಟ್ಟಡ ನಿರ್ಮಿಸಲಾಗಿದೆಯೇ, ಶೇಕಡಾ ಎಷ್ಟು ಪ್ರಮಾಣದಲ್ಲಿ ನಕ್ಷೆ ಉಲ್ಲಂಘಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ನಂತರ ತೆರವು ಗೊಳಿಸಲಾಗುವುದು. ಶೀಘ್ರದಲ್ಲಿ ತೆರವು ಕಾರ್ಯಾ ಚರಣೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

50 ಕೋಟಿ ಹಣವಿದೆ:

ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿದ ಕಟ್ಟಡಗಳ ತೆರವಿಗೆ ಹಣದ ಕೊರತೆ ಇಲ್ಲ. ಸುಮಾರು ₹50 ಕೋಟಿ ಮೀಸಲಿಡಲಾಗಿದೆ. ಕಳೆದ ಎರಡು ತಿಂಗಳಿನಲ್ಲಿ ಸುಮಾರು 30 ಕಟ್ಟಡ ತೆರವಿಗೆ ಆದೇಶಿಸಿದ್ದೇನೆ ಎಂದು ಆಯುಕ್ತರು ಸ್ಪಷ್ಟಪಡಿಸಿದೆ.

ದಕ್ಷಿಣದಲ್ಲಿ ಹೆಚ್ಚು, ದಾಸರಹಳ್ಳಿಯಲ್ಲಿ ಕಡಿಮೆ:

ಬಿಬಿ ಎಂಪಿ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿರುವ ಮಾಹಿತಿ ಪ್ರಕಾರ ಬಿಬಿಎಂಪಿಯ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 274 ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿದ ಕಟ್ಟಡಗಳಿವೆ ಎಂದು ತಿಳಿಸಿದೆ. ಉಳಿದಂತೆ ಮಹದೇವಪುರದಲ್ಲಿ 176,ಯಲಹಂಕದಲ್ಲಿ 136, ಪೂರ್ವದಲ್ಲಿ 108, ಆರ್.ಆರ್.ನಗರ 103, ಬೊಮ್ಮನಹಳ್ಳಿದಲ್ಲಿ 92, ಪಶ್ಚಿಮದಲ್ಲಿ 88 ಕಟ್ಟಡಳಿದ್ದರೆ, ಅತಿ ಕಡಿಮೆ ದಾಸರಹಳ್ಳಿ ವಲಯದಲ್ಲಿ ಕೇವಲ ಎರಡು ಕಟ್ಟಡ ಇವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಮಾಹಿತಿ ಬಗ್ಗೆ ಅನುಮಾನ

ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡುವ ಪ್ರಕಾರ ನಗರದಲ್ಲಿ ಸುಮಾರು 19 ಲಕ್ಷ ಆಸ್ತಿಗಳಿವೆ. ಅದರಲ್ಲಿ ಪ್ರತಿ ವರ್ಷ ಸುಮಾರು 1.5 ಲಕ್ಷ ಆಸ್ತಿಗಳು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತವೆ. ಆದರೆ, ಬಿಬಿಎಂಪಿ ಅಧಿಕಾರಿಗಳು 800 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಬೃಹತ್ ನಗರದಲ್ಲಿ ಕೇವಲ 980 ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿವೆ ಎಂದು ಮಾಹಿತಿ ನೀಡಿರುವ ಬಗ್ಗೆಯೇ ಅನುಮಾನ ವ್ಯಕ್ತಪ ಡಿಸಲಾಗುತ್ತಿದೆ. ನಗರದಲ್ಲಿ ಸರಿಯಾಗಿ ಸಮೀಕ್ಷೆ ನಡೆಸಿದರೆ ಹಲವು ಸಾವಿರ ಅಕ್ರಮ ಕಟ್ಟಡಗಳು ದೊರೆಯಬಹುದು. ಹೀಗಾಗಿ ಬಿಬಿಎಂಪಿ ಸಮೀಕ್ಷೆ ಸಮರ್ಪಕವಾಗಿಲ್ಲ ಎಂದು ಆರೋಪಿಸಲಾಗುತ್ತಿದೆ.

ಸುಪ್ರೀಂ ತೀರ್ಪಿನ ನಂತರ ಮುಂದಿನ ನಿರ್ಧಾರ: ಸಂಸದ ಹುಕ್ಕೇರಿ

Follow Us:
Download App:
  • android
  • ios