ಐವಿಎಫ್ ಚಿಕಿತ್ಸೆ ಜೊತೆ ಕಚೇರಿ ಕೆಲಸ ಸಂಭಾಳಿಸೋದು ಕಷ್ಟವೇನಲ್ಲ, ಇಲ್ನೋಡಿ
ಬಂಜೆತನ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಗರ್ಭಧಾರಣೆ ಮಹಿಳೆಯರಿಗೆ ಸವಾಲಾಗ್ತಿದೆ. ಮಕ್ಕಳಿಗಾಗಿ ಮಹಿಳೆಯರು ಐವಿಎಫ್ ಚಿಕಿತ್ಸೆಗೆ ಮುಂದಾಗ್ತಿದ್ದಾರೆ. ಆದ್ರೆ ಇದ್ರಿಂದಾಗುವ ಮಾನಸಿಕ ಹಾಗೂ ದೈಹಿಕ ನೋವು ಅವರನ್ನು ಮತ್ತಷ್ಟು ಹೈರಾಣ ಮಾಡ್ತಿದೆ.
ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸ್ತಾರೆ. ಅನೇಕರಿಗೆ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಇದ್ರಿಂದ ಮಾನಸಿಕ, ದೈಹಿಕ ನೋವು ತಿನ್ನಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ನಾನಾ ವಿಧಾನಗಳಲ್ಲಿ ಗರ್ಭಧಾರಣೆಗೆ ಪ್ರಯತ್ನ ನಡೆಯುತ್ತದೆ. ಅದ್ರಲ್ಲಿ ಐವಿಎಫ್ ಕೂಡ ಒಂದು. ಐವಿಎಫ್ ಹೆಸರು ಕೇಳಿದಾಗ ಬಹುತೇಕರು ಆತಂಕಕ್ಕೆ ಒಳಗಾಗ್ತಾರೆ. ಇದ್ರಿಂದ ಬೇರೆ ಸಮಸ್ಯೆಯಾಗಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಐವಿಎಫ್ ಚಿಕಿತ್ಸೆಗೆ ಒಳಗಾದವರು ಮಾನಸಿಕ ಗೊಂದಕ್ಕೊಳಗಾಗ್ತಾರೆ. ಕೆಲಸ, ಮನೆ, ಸಮಾಜದ ಎಲ್ಲವೂ ಅವರನ್ನು ಭಯಕ್ಕೆ ತಳ್ಳುವುದಿದೆ.
ಐವಿಎಫ್ (IVF) ಚಿಕಿತ್ಸೆ ನಂತ್ರ ಪೂರ್ಣ ಸಮಯ ಉದ್ಯೋಗ (Employment) ಮಾಡುವವರಿದ್ದಾರೆ. ಕೆಲಸದ ಸಮಯದಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಇಂದು ನಾವು ಐವಿಎಫ್ ಚಿಕಿತ್ಸೆ (Treatment) ನಂತ್ರ ನಿಮ್ಮನ್ನು ನೀವು ಹೇಗೆ ಸಂಭಾಳಿಸಬೇಕು ಎಂಬುದನ್ನು ಹೇಳ್ತೇವೆ.
ಇದು ನಿಮ್ಮದೊಂದೇ ಸಮಸ್ಯೆಯಲ್ಲ : ಸಹಜ ಗರ್ಭಧಾರಣೆ (Pregnancy) ಸಾಧ್ಯವಾಗದ ವೇಳೆ ಐವಿಎಫ್ ಗೆ ಒಳಗಾಗುವುದು ಈಗಿನ ದಿನಗಳಲ್ಲಿ ಮಾಮೂಲಿ. ನೀವು ಈ ಬಗ್ಗೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ನಿಮ್ಮಂತೆ ಅನೇಕ ಮಹಿಳೆಯರು ಈ ಸವಾಲನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಪ್ರಕಾರ, ಅಮೆರಿಕಾದಲ್ಲಿ ಸುಮಾರು ಶೇಕಡಾ 10 ರಿಂದ 15 ರಷ್ಟು ಮಹಿಳೆಯರು ಬಂಜೆತನದಿಂದ ಬಳಲುತ್ತಿದ್ದಾರೆ. ಭಾರತದಲ್ಲಿಯೂ ಬಂಜೆತನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಹಾಗೆ ಐವಿಎಫ್ ಚಿಕಿತ್ಸೆಗೆ ಒಳಗಾಗ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಕಚೇರಿಯಲ್ಲಿ ಹೇಳುವ ಅಗತ್ಯ ಎಷ್ಟಿದೆ ? : ನಿಮ್ಮ ಆರೋಗ್ಯದಲ್ಲಾಗ್ತಿರುವ ಬದಲಾವಣೆ ಬಗ್ಗೆ ಕಚೇರಿಯಲ್ಲಿ ಹೇಳುವ ಅಗತ್ಯವಿರುವುದಿಲ್ಲ. ಇಂಥ ಸೂಕ್ಷ್ಮ ವಿಷ್ಯಗಳು ಕುಟುಂಬಸ್ಥರಿಗೆ ತಿಳಿದಿದ್ರೆ ಸಾಕು. ಕಚೇರಿಯಲ್ಲಿ ಆರೋಗ್ಯದ ವಿಷ್ಯಗಳು ತಿಳಿದ್ರೆ ಮತ್ತಷ್ಟು ನಿಮ್ಮ ಮನಸ್ಸಿಗೆ ನೋವಾಗುವ ಘಟನೆಗಳು ನಡೆಯಬಹುದು. ಹಾಗಾಗಿ ಈ ಬಗ್ಗೆ ಹೇಳುವ ಅಗತ್ಯವಿಲ್ಲ.
ಕೆಲಸಕ್ಕೆ ರಜೆ (Leave) ಪಡೆಯೋದು ಹೇಗೆ ? : ಈಗಾಗಲೇ ಹೇಳಿದಂತೆ ನಿಮ್ಮ ಸಮಸ್ಯೆಯನ್ನು ಕಚೇರಿಯಲ್ಲಿ ಹೇಳಬೇಕಾಗಿಲ್ಲ. ಆದ್ರೆ ಚಿಕಿತ್ಸೆಗೆ ಹೆಚ್ಚುವರಿ ರಜೆಗಳ ಅಗತ್ಯವಿರುತ್ತದೆ. ಆ ಸಂದರ್ಭದಲ್ಲಿ ಮ್ಯಾನೇಜ್ ಮಾಡುವ ಕಲೆ ನಿಮಗೆ ತಿಳಿದಿರಬೇಕು. ಕೆಲ ಕಚೇರಿಗಳಲ್ಲಿ ಇದಕ್ಕೆ ರಜೆ ನೀಡಲಾಗುತ್ತದೆ. ಮತ್ತೆ ಕೆಲ ಕಚೇರಿಗಳಲ್ಲಿ ರಜೆ ನೀಡುವುದಿಲ್ಲ. ಅಂಥ ಸಂದರ್ಭದಲ್ಲಿ ನೀವು ಎಚ್ ಆರ್ ಜೊತೆ ಮಾತನಾಡಿ, ವರ್ಕ್ ಫ್ರಂ ಹೋಂ ಸೌಲಭ್ಯವನ್ನು ಪಡೆಯಬಹುದು. ಆಗ ಮನೆಯಲ್ಲಿ ಕೆಲಸ ಮಾಡ್ತಾ ನೀವು ವಿಶ್ರಾಂತಿ ಪಡೆಯಬಹುದು.
Winter Blues: ಇದು ಆರೋಗ್ಯ ಸಮಸ್ಯೆ ಅಲ್ವೇ ಅಲ್ಲ, ಬರೀ ಚಳಿಗಾಲದ ಕಿರಿಕಿರಿ
ಇಂಟರ್ನೆಟ್ (Internet) ಸಹವಾಸ ಬೇಡ : ನೀವು ಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಬೇರೆ ಯಾವುದೋ ಚಿಕಿತ್ಸೆಗೆ ಒಳಗಾಗಿದ್ದರೆ ಇಂಟರ್ನೆಟ್ ನಲ್ಲಿ ಹುಡುಕಾಟ ಶುರು ಮಾಡಬೇಡಿ. ಬಹುತೇಕರು ಪಡೆಯುತ್ತಿರುವ ಚಿಕಿತ್ಸೆ ಅಥವಾ ಖಾಯಿಲೆ ಬಗ್ಗೆ ಇಂಟರ್ನೆಟ್ ನಲ್ಲಿ ಮಾಹಿತಿ ಪಡೆದು ಮತ್ತಷ್ಟು ಒತ್ತಡಕ್ಕೊಳಗಾಗ್ತಾರೆ. ಬಂಜೆತನ, ಐವಿಎಫ್ ಚಿಕಿತ್ಸೆ, ಅದ್ರ ಅಡ್ಡ ಪರಿಣಾಮ, ಅದ್ರ ಅನುಕೂಲ ಈ ಬಗ್ಗೆ ನೀವು ಇಂಟರ್ನೆಟ್ ನಲ್ಲಿ ಹುಡುಕಾಡಿದ್ರೆ ನಿಮ್ಮ ಮನಸ್ಸು ಮತ್ತಷ್ಟು ಗೊಂದಲಕ್ಕೀಡಾಗುತ್ತದೆ.
ನೀವು ಕೂಡ ಪದೇ ಪದೇ ಮೂಗಿಗೆ ಬೆರಳು ಹಾಕ್ತೀರಾ? ಭಾರಿ ಡೇಂಜರ್
ಭಾವನಾತ್ಮಕ ಬೆಂಬಲ (Emotional support) ಅಗತ್ಯ : ದೀರ್ಘ ಸಮಯದವರೆಗೆ ಮಕ್ಕಳಾಗ್ಲಿಲ್ಲ ಎಂದಾಗ ಮನಸ್ಸು ಘಾಸಿಯಾಗುವುದು ಸಹಜ. ನೀವು ಯಾವುದೇ ರೀತಿಯಲ್ಲಿ ಗರ್ಭಧರಿಸಿ, ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿರುತ್ತದೆ. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಹಾಯವನ್ನು ನೀವು ಪಡೆಯಬಹುದು. ನಿಮ್ಮ ಮನಸ್ಸಿನಲ್ಲಾಗುವ ನೋವು, ಗೊಂದಲವನ್ನು ನೀವು ಅವರ ಮುಂದೆ ಹೇಳಬಹುದು. ಫರ್ಟಿಲಿಟಿ ಸಪೋರ್ಟ್ ಗ್ರೂಪ್ ಬೆಂಬಲವನ್ನು ಕೂಡ ನೀವು ಪಡೆಯಬಹುದು.