Asianet Suvarna News Asianet Suvarna News

NeoCov: ಸೋಂಕಿತರಾದ ಮೂವರಲ್ಲಿ ಒಬ್ಬರು ಸಾವು: ವಿಜ್ಞಾನಿಗಳಿಂದ ಎಚ್ಚರ

ಒಮಿಕ್ರೋನ್‌ ವೈರಸ್‌ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್‌’ (NeoCov )ಎಂಬ ಹೊಸ ಕೋವಿಡ್‌ ರೂಪಾಂತರಿ ಪತ್ತೆಯಾಗಿದೆ. 

ಬೀಜಿಂಗ್‌ (ಜ. 31): ಒಮಿಕ್ರೋನ್‌ ವೈರಸ್‌ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್‌’ (NeoCov) ಎಂಬ ಹೊಸ ಕೋವಿಡ್‌ ರೂಪಾಂತರಿ ಪತ್ತೆಯಾಗಿದೆ. 

ಸದ್ಯ ಇದು ಬಾವಲಿಗಳಲ್ಲಿ ಮಾತ್ರ ಹರಡುತ್ತಿದ್ದು, ಭವಿಷ್ಯದಲ್ಲಿ ಮನುಷ್ಯರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ವೇಳೆ ಮತ್ತಷ್ಟು ರೂಪಾಂತರಗೊಂಡರೆ ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಇದರಿಂದ ಸೋಂಕಿತನಾದ ಮೂವರಲ್ಲಿ ಒಬ್ಬರು ಸಾವನ್ನಪ್ಪಲಿದ್ದಾರೆ’ ಎಂದು ಚೀನಾದ ವುಹಾನ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

 ಮನುಷ್ಯರಲ್ಲಿ ಇನ್ನೂ ಕಂಡುಬಂದಿಲ್ಲ. ಆದರೆ ಅತಿ ವೇಗವಾಗಿ ಹರಡುವ, ಸಾವಿಗೆ ಕಾರಣವಾಗುವ ವೈರಸ್‌ ಇದಾಗಿದೆ. ನಿಯೋಕೋವ್‌ ಮತ್ತಷ್ಟು ರೂಪಾಂತರಗೊಂಡರೆ ಮನುಷ್ಯನಿಗೆ ಅಪಾಯ ಆಗಬಹುದು’ ಎಂದು ವುಹಾನ್‌ ವಿವಿ ತಜ್ಞರು ಎಚ್ಚರಿಸಿದ್ದಾರೆ.
 

Video Top Stories