Asianet Suvarna News Asianet Suvarna News

Russia Ukraine War ಸುಸ್ತಾದ ರಷ್ಯಾ ಸೇನೆ, ಉಕ್ರೇನ್‌ ಸೈನ್ಯಕ್ಕೆ ಹೊಸ ಬಲ!

ಉಕ್ರೇನ್ ಅನ್ನು ನಿರ್ನಾಮ ಮಾಡಿಯೇ ಸಿದ್ಧ ಎಂದು ಪುಟಿದೆದ್ದು ಕುಳಿತಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನಿರಾಸೆ ಕಾಡಿದೆ. ಉಕ್ರೇನ್ ನೆಲದಲ್ಲಿ ರಷ್ಯಾ ಸೇನೆಯು ಸುಸ್ತಾಗಿರುವಂತೆ ಕಾಣುತ್ತಿದೆ. ಅಷ್ಟಕ್ಕೂ ರಷ್ಯಾ ಸೇನೆಗೆ ಹಿನ್ನಡೆಯಾಗಿರುವ ಅಂಶವೇನು?
 

First Published Apr 2, 2022, 6:55 PM IST | Last Updated Apr 2, 2022, 6:55 PM IST

ಬೆಂಗಳೂರು (ಏ.2): ಉಕ್ರೇನ್ (Ukraine) ಮೇಲೆ ಆಕ್ರಮಣ ಮಾಡಿ ಒಂದು ತಿಂಗಳಿಗೂ ಹೆಚ್ಚು ಕಾಲವಾಗಿದೆ. ಆದರೆ, ರಷ್ಯಾ ಸೇನೆಗೆ (Russia Army) ವಿಜಯ ಎನ್ನುವುದು ಇನ್ನೂ ಸಿಕ್ಕಿಲ್ಲ. ಕನಿಷ್ಠ ಪಕ್ಷ ಉಕ್ರೇನ್ ನ ರಾಜಧಾನಿ ಕೀವ್ (Kyiv) ಅನ್ನೂ ವಶಪಡಿಸಿಕೊಳ್ಳಲೂ ರಷ್ಯಾ ವಿಫಲವಾಗಿದ್ದು, ಇದಕ್ಕೆಲ್ಲ ಏನು ಕಾರಣ ಎನ್ನುವ ವಿಶ್ಲೇಷಣೆಯನ್ನು ಜಾಗತಿಕ ಮಟ್ಟದಲ್ಲಿ ಮಾಡಲಾಗುತ್ತಿದೆ.

ಉಕ್ರೇನ್ ನೆಲದಲ್ಲಿ ರಷ್ಯಾ ಸೇನೆ ಸಂಪೂರ್ಣವಾಗಿ ಸುಸ್ತಾಗಿದೆ ಎನ್ನುವುದು ವರದಿಯಾಗಿದೆ. ಮೂಲಗಳ ಪ್ರಕಾರ, ರಷ್ಯಾದ (Russia) ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ತಾವೇ ನಾಶ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ ರಷ್ಯಾ ಸೇನೆಯ ಸೈನಿಕರಿಗೆ ( Soldiers) ಕಾಡುತ್ತಿರುವ ಅಂಶ ಏನು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Russia Ukraine War ಹುಷಾರ್‌ ಇಂಡಿಯಾ, ವಾರ್ನಿಂಗ್ ಕೊಟ್ಟ ಅಮೆರಿಕಾ!

ಆರಂಭದಲ್ಲಿ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಮಾಡುವುದು ಮಾತ್ರವೇ ರಷ್ಯಾದ ಇರಾದೆಯಾಗಿತ್ತು. ಆದರ, ಈಗ ಉಕ್ರೇನ್ ಅನ್ನು ಗೆಲ್ಲಲೇಬೇಕು ಎನ್ನುವ ಪಣತೊಟ್ಟು ರಷ್ಯಾ ಹೋರಾಟ ನಡೆಸಿದೆ. ಯಾಕೆಂದರೆ, ಈ ಯುದ್ಧ ರಷ್ಯಾ ಪಾಲಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಹಾಗೇನಾದರೂ ರಷ್ಯಾ ಸೋಲು ಕಂಡರೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಲಿದೆ ಎನ್ನುವ ನಿಟ್ಟಿನಲ್ಲಿ ರಷ್ಯಾ ಯೋಚನೆ ಮಾಡಿದೆ.