Asianet Suvarna News Asianet Suvarna News

ದಕ್ಷಿಣ ಆಫ್ರಿಕಾದಲ್ಲಿ 'ಮೇಗಿ' ತೂಪಾನ್, 30 ಭಯಂಕರ ದೃಶ್ಯಗಳು

ದಕ್ಷಿಣ ಆಫ್ರಿಕಾದಲ್ಲಿ (South Africa) ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Rain) ಪೂರ್ವ ಕರಾವಳಿ ನಗರ ಡರ್ಬನ್‌ ಮತ್ತು ಸುತ್ತಮುತ್ತ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು, 300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹಲವಾರು ಬೆಟ್ಟಗಳು ಕುಸಿದಿವೆ, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 

First Published Apr 15, 2022, 4:37 PM IST | Last Updated Apr 15, 2022, 4:37 PM IST

ದಕ್ಷಿಣ ಆಫ್ರಿಕಾದಲ್ಲಿ (South Africa) ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Rain) ಪೂರ್ವ ಕರಾವಳಿ ನಗರ ಡರ್ಬನ್‌ ಮತ್ತು ಸುತ್ತಮುತ್ತ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು, 300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹಲವಾರು ಬೆಟ್ಟಗಳು ಕುಸಿದಿವೆ, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನೂರಾರು ಜನರು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸೇತುವೆಗಳು, ರಸ್ತೆಗಳು ಕುಸಿದಿವೆ. ಹವಮಾನ ವೈಪರೀತ್ಯದಿಂದಾಗಿ ಈ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ 6 ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವ ರಕ್ಷಣೆಗಾಗಿ ಹೆಚ್ಚುವರಿ 300 ಅಧಿಕಾರಿಗಳನ್ನು ನೇಮಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ವಿಮಾನಗಳನ್ನು ನೇಮಿಸಲಾಗಿದೆ.
 

Video Top Stories