Asianet Suvarna News Asianet Suvarna News

ಹಮಾಸ್ ಉಗ್ರರ ಸರ್ವನಾಶಕ್ಕೆ ಪಣತೊಟ್ಟ ಇಸ್ರೇಲ್, ಇಂಚಿಂಚು ಬಿಡದೆ ದಾಳಿ!

ಹಮಾಸ್ ಉಗ್ರರ ಮೇಲೆ ಮುಗಿಬಿದ್ದ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ. ಇನ್ನು ಇಸ್ರೇಲ್ ಒಳ ನುಗ್ಗಿ ಸಿಕ್ಕ ಸಿಕ್ಕವರನ್ನು ಹತ್ಯೆ ಮಾಡುತ್ತಿರುವ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲೂ ದಾಳಿ ಆರಂಭಿಸಲಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ಧದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಸ್ರೇಲ್ ತನ್ನ ಇತಿಹಾಸದಲ್ಲೇ ಇದುವರೆಗೆ ಎದುರಿಸದಂತ ದಾಳಿಯನ್ನು ಹಮಾಸ್ ಉಗ್ರರಿಂದ ಎದುರಿಸಬೇಕಾಯಿತು. ಇದು ಕೇವಲ ಇಸ್ರೇಲ್ ಸರ್ಕಾರ, ಸೇನೆ ವಿರುದ್ದ ನಡೆದ ದಾಳಿಯಾಗಿರಲಿಲ್ಲ, ಇಸ್ರೇಲ್ ಮಕ್ಕಳು, ಹೆಣ್ಣುಮುಕ್ಕಳು, ಮಹಿಳೆಯು, ಸಾರ್ವಜನಿಕರು, ವಿದೇಶಿಗರನ್ನೂ ಟಾರ್ಗೆಟ್ ಮಾಡಲಾಗಿತ್ತು. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಯುದ್ಧ ಘೋಷಿಸಿ ಹಮಾಸ್ ಉಗ್ರರ ಮೇಲೆ ಮುಗಿಬಿದ್ದಿದೆ. ಇಸ್ರೇಲ್ ಹೊಡೆತಕ್ಕೆ ಹಮಾಸ್ ಉಗ್ರರ ಬಿಲಗಳು ಧ್ವಂಸಗೊಂಡಿದೆ. ಇತ್ತ ಲೆಬೆನಾನ್‌ನಲ್ಲಿರುವ ಉಗ್ರಸಂಘಟನೆ ಇದೀಗ ಇಸ್ರೇಲ್ ಸೇನೆ ಮೇಲೆ ರಾಕೆಟ್ ದಾಳಿ ನಡೆಸಿದೆ. ಇದಕ್ಕೂ ಅಷ್ಟೇ ಖಾರವಾದ ಪ್ರತಿಕ್ರಿಯೆಯನ್ನು ಇಸ್ರೇಲ್ ನೀಡಿದೆ. ಗಾಜಾ ಈ ಹಿಂದಿನಂತಾಗಲು ಸಾಧ್ಯವೇ ಇಲ್ಲ. ಇದು ಇಸ್ರೇಲ್ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಘನಘೋರ ಯುದ್ಧ ಎಂದು ಇಸ್ರೇಲ್ ಹೇಳಿದೆ.
 

Video Top Stories