Asianet Suvarna News Asianet Suvarna News

Covid 19: ಚೀನಾದಲ್ಲಿ 2 ಕೇಸು, 90 ಲಕ್ಷ ಜನರಿಗೆ ಲಾಕ್ಡೌನ್‌ ಬಿಸಿ!

ಕೊರೋನಾ ತವರು ಮನೆ  ಚೀನಾದಲ್ಲಿ ಇದೀಗ ಕೇವಲ 2 ಕೋವಿಡ್‌ ಕೇಸು ಕಂಡುಬಂದ ಹಿನ್ನೆಲೆಯಲ್ಲಿ ಚೀನಾ 90 ಲಕ್ಷ ಜನರು ನೆಲೆಸಿರುವ ಚಾಂಗ್‌ಚುನ್‌ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. 

First Published Mar 12, 2022, 10:12 AM IST | Last Updated Mar 12, 2022, 10:12 AM IST

ಕೊರೋನಾ ತವರು ಮನೆ  ಚೀನಾದಲ್ಲಿ ಇದೀಗ ಕೇವಲ 2 ಕೋವಿಡ್‌ ಕೇಸು ಕಂಡುಬಂದ ಹಿನ್ನೆಲೆಯಲ್ಲಿ ಚೀನಾ 90 ಲಕ್ಷ ಜನರು ನೆಲೆಸಿರುವ ಚಾಂಗ್‌ಚುನ್‌ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. ಕೋವಿಡ್‌ ಮುಕ್ತ ರಾಷ್ಟ್ರವಾಗಿಸಲು ಪಣತೊಟ್ಟ ಚೀನಾ 2 ಕೇಸು ದಾಖಲಾಗಿದ್ದಕ್ಕೆ ಕಠಿಣ ನಿರ್ಬಂಧಗಳನ್ನು ಹೇರಿದೆ.

ಹೊಸ ನಿರ್ಬಂಧಗಳ ಅನ್ವಯ, ಎಲ್ಲ ನಾಗರಿಕರು ಕಡ್ಡಾಯವಾಗಿ ಮನೆಯೊಳಗಿರಬೇಕು ಹಾಗೂ ಪ್ರತಿಯೊಬ್ಬರು 3 ಸುತ್ತಿನ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇನ್ನಿತರ ಸೇವೆಗಳು, ಸಾರ್ವಜನಿಕ ಸಂಚಾರ ಸೌಲಭ್ಯಗಳ ಮೇಲೂ ನಿರ್ಬಂಧಗಳನ್ನು ಹೇರಲಾಗಿದೆ. ಜಿಲಿನ್‌ ನಗರದಲ್ಲೂ ಕೋವಿಡ್‌ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಭಾಗಶಃ ಲಾಕ್‌ಡೌನ್‌ ಘೋಷಿಸಲಾಗಿದ್ದು, ಇತರೆ ಅಂತರ ನಗರ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

Video Top Stories