Asianet Suvarna News Asianet Suvarna News

ಬೆಂಗಳೂರಿನಲ್ಲಿ ಶಾಕ್ ಹೊಡೆದ ಅನುಭವ ಆಗೋಕೆ ಕಾರಣವೇನು? ತಜ್ಞರು ಏನಂತಾರೆ?

ವಾರದ ಹಿಂದೆ ಬೆಂಗಳೂರಿನಲ್ಲಿ ಏನ್ ಮುಟ್ಟಿದ್ರೂ ಶಾಕ್ ಹೊಡೆದ ಅನುಭವ ಆಗ್ತಿತ್ತು. ಮತ್ತೊಬ್ಬರನ್ನು ಮುಟ್ಟಿದಾಗ, ಚೇರ್ ಟಚ್ ಮಾಡಿದಾಗ, ಕಬ್ಬಿಣದ ಕಂಬಿ ಮುಟ್ಟಿದಾಗ ಹೀಗೆ ಆಗಾಗ ಶಾಕ್‌ ಹೊಡೆಸಿಕೊಂಡ ಅನುಭವ ಉಂಟಾಗ್ತಿತ್ತು. ಹೀಗೆಲ್ಲಾ ಆಗ್ತಿರೋದ್ಯಾಕೆ ಇಲ್ಲಿದೆ ಮಾಹಿತಿ.

ಬಿಸಿಲಿನ ತಾಪಕ್ಕೆ ಮಾತ್ರ ಇಂಥಾ ಸಮಸ್ಯೆ ಕಾಡುತ್ತೆ ಅಂತೇನಿಲ್ಲ. ಬಿಸಿಲಿದ್ದಾಗ ಇಂಥಾ ಶಾಕ್‌ನ ಪರಿಣಾಮ ಉಂಟಾಗುತ್ತೆ ಅನ್ನೋದಂತೂ ನಿಜ ಎಂದು ನ್ಯಾಷನಲ್ ಕಾಲೇಜ್‌ನ ವಿ.ಜಗದೀಶ್ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಕೆ.ಎಸ್ ನಟರಾಜ್ ಹೇಳಿದ್ದಾರೆ. ಬಿಸಿಲು ಹೆಚ್ಚಿದ್ದಾಗ ಹ್ಯುಮಿಡಿಟಿ ಅಥವಾ ಆರ್ದ್ರತೆ ಹೆಚ್ಚಾಗುತ್ತೆ. ಹ್ಯುಮಿಡಿಟಿ ಎಂದರೆ ನೀರಿನಂಶ ಅಥವಾ ಮಾಯ್ಚಿಚರ್‌. ವಾತಾವರಣದಲ್ಲಿ ಹ್ಯುಮಿಡಿಟಿ ಕಡಿಮೆಯಾದಾಗ ಹೀಗೆ ಶಾಕ್ ಹೊಡೆದ ಅನುಭವವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮುಟ್ಟಿದ ಕಡೆಯಲೆಲ್ಲಾ ಶಾಕ್‌ ಹೊಡೀತಿದ್ಯಲ್ಲಾ, ಯಾಕ್‌ ಹೀಗೆ?

Video Top Stories