Asianet Suvarna News Asianet Suvarna News

Hitler Kalyan Serial: ಜೀ ಕನ್ನಡದಲ್ಲಿ ಮಾರ್ಚ್‌ 6ಕ್ಕೆ ಹಿಟ್ಲರ್ ಕಲ್ಯಾಣ ಜಾತ್ರೆ!

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್‌ ಕಲ್ಯಾಣ’ ತಂಡದಿಂದ ‘ಹಿಟ್ಲರ್‌ ಕಲ್ಯಾಣ ಜಾತ್ರೆ’ ಕಾರ್ಯಕ್ರಮ ಕೊಪ್ಪಳದ ಯಲಬುರ್ಗಾದಲ್ಲಿ ನಡೆಯಲಿದ್ದು, ಟಿವಿಯಲ್ಲಿ ಮಾ.6ರ ಸಂಜೆ 7.30ರಿಂದ ಪ್ರಸಾರವಾಗಲಿದೆ.

ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್‌ ಕಲ್ಯಾಣ’ (Hitler Kalyana) ತಂಡದಿಂದ ‘ಹಿಟ್ಲರ್‌ ಕಲ್ಯಾಣ ಜಾತ್ರೆ’ ಕಾರ್ಯಕ್ರಮ ಕೊಪ್ಪಳದ ಯಲಬುರ್ಗಾದಲ್ಲಿ ನಡೆಯಲಿದ್ದು, ಟಿವಿಯಲ್ಲಿ ಮಾ.6ರ ಸಂಜೆ 7.30ರಿಂದ ಪ್ರಸಾರವಾಗಲಿದೆ. ಈ ಸಂತೆಯಲ್ಲಿ ವೀಕ್ಷಕರು ಧಾರಾವಾಹಿಯ ಕಲಾವಿದರ ಜೊತೆಗೆ ಮಾತನಾಡಬಹುದು. ಎಜೆ, ಲೀಲಾ, ದುರ್ಗಾ, ಲಕ್ಷ್ಮೀ, ಸರಸ್ವತಿ, ಅಂತರ ಹಾಗೂ ವಿಶ್ವರೂಪ ಪಾತ್ರಧಾರಿಗಳು ಜನರ ಜೊತೆಗೆ ಸಂವಾದ ನಡೆಸಲಿದ್ದಾರೆ. ಜೊತೆಗೆ ‘ಪಾರು’ (Paaru) ಧಾರಾವಾಹಿಯ ಆದಿತ್ಯ ಹಾಗೂ ಪಾರು ಪಾತ್ರಧಾರಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಟಿಆರ್‌ಪಿಯಲ್ಲಿ (TRP) ಇಂದಿಗೂ ‘ಹಿಟ್ಲರ್‌ ಕಲ್ಯಾಣ’ ಟಾಪ್‌ ಸ್ಥಾನ ಕಾಯ್ದುಕೊಂಡಿದೆ ಎಂದೂ ಜೀ ಕನ್ನಡ ತಿಳಿಸಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies