Asianet Suvarna News Asianet Suvarna News

ಚಂದನ್‌ ಶೆಟ್ಟಿಗೆ ಬೀಪ್‌ ಸೌಂಡ್‌ನಲ್ಲಿ ಬೈದ ನಿವೇದಿತಾ ಗೌಡ, ಅಂಥದ್ದೇನು ಮಾಡಿದ್ರು?

ರಾಪರ್‌ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಗಾಂಧಿನಗರದಲ್ಲಿ ಹೊಸ ಗಾಸಿಪ್‌ ಓಡಾಡುತ್ತಿದೆ. ಅದೇನು ಅಂದ್ರಾ? ಇಲ್ಲಿದೆ ನೋಡಿ
 

ಬೆಂಗಳೂರು (ಜು.22): ಹಾಡು, ರಾಪ್‌ ಮಾಡ್ಕೊಂಡು ಆರಾಮಾಗಿ ಇದ್ದ ಚಂದನ್‌ ಶೆಟ್ಟಿ ಈಗ ಸಂಪೂರ್ಣ ಬದಲಾಗಿದ್ದಾರೆ. ಬಿಗ್‌ ಬಾಸ್‌ನಲ್ಲಿ ಪರಿಚಯವಾದ ನಿವೇದಿತಾ ಗೌಡರನ್ನು ಮದುವೆಯಾದ ಬಳಿಕ ಚಂದನ್‌ ಶೆಟ್ಟಿ ತಮ್ಮ ಹಾಡುಗಳಿಗಿಂತ ಹೆಚ್ಚಾಗಿ ಇನ್ಸ್‌ಟಾಗ್ರಾಮ್‌ ರೀಲ್ಸ್‌ಗಳಿಂದಲೇ ಫೇಮಸ್‌ ಆಗ್ತಿದ್ದಾರೆ.

ಒಮ್ಮೊಮ್ಮೆ ಲವ್‌ ಬರ್ಡ್ಸ್‌ ತರ ಇನ್ನೊಮ್ಮೆ ಗಂಡ ಹೆಂಡ್ತಿ ಥರ ಕಾಣುವ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ ನೋಡಿದ್ರೆ ಟಾಮ್‌ ಆಂಡ್‌ ಜೆರ್ರಿ ನೆನಪಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇತ್ತೀಚೆಗೆ ಇವರಿಬ್ಬರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

 

ಹೇಗೂ ಸುದ್ದಿ ಆಗಿದ್ಯಲ್ಲಾ, ಮಗು ಮಾಡ್ಕೊಂಬಿಡು ಗುರೂ! ಚಂದನ್‌ ಶೆಟ್ಟಿಗೆ ಗೆಳೆಯರ‌ ಸಲಹೆ

ಇದನ್ನು ಕಂಡವರೇ ಹೀಗೆ ಮಕ್ಳು ಥರ ಆಡೋದು ಬಿಟ್ಟು, ಅಪ್ಪ-ಅಮ್ಮ ಆಗೋದ್ರ ಬಗ್ಗೆ ಯೋಚಿಸಿ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಇವರ ಓವರ್‌ ಆಕ್ಟಿಂಗ್‌ ನೋಡೋಕೆ ಆಗ್ತಿಲ್ಲ ಅಂತಾ ಹೇಳ್ಕೊಂಡೇ ವಿಡಿಯೋಗೆ ಲೈಕ್‌ ಒತ್ತಿದ್ದಾರೆ.