ಮಾಸ್ಕ್ ಇಲ್ಲ; ದಂಡ ಕಟ್ಟಲು ದುಡ್ಡಿಲ್ಲ ಎಂದವರು ಪೊಲೀಸ್ ವಶಕ್ಕೆ
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿದ್ದರೆ ಅಂತವರಿಗೆ 1 ಸಾವಿರ ರೂ ದುಬಾರಿ ದಂಡ ಹಾಕಲಾಗುತ್ತಿದೆ.
ಬೆಂಗಳೂರು (ಅ. 07): ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿದ್ದರೆ ಅಂತವರಿಗೆ 1 ಸಾವಿರ ರೂ ದುಬಾರಿ ದಂಡ ಹಾಕಲಾಗುತ್ತಿದೆ. ಮಾರ್ಷಲ್‌ಗಳು ರಸ್ತೆಗಿಳಿದು ಸಾರ್ವಜನಿಕರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಮಾರ್ಷಲ್‌ಗಳ ಜೊತೆ ಜಗಳಗಳಾಗುತ್ತಿವೆ. ಜನರ ಜೊತೆ ಗುದ್ದಾಡಿ ಪೊಲೀಸರೇ ಹೈರಾಣಾಗಿ ಹೋಗಿದ್ದಾರೆ.
ಕಾನೂನು ಜಾರಿ ಮಾಡುವಾಗ ಜನರಿಗೆ ಮೊದಲೇ ತಿಳಿಸಿದ್ದರೆ ಇಷ್ಟೊಂದು ಯಡವಟ್ಟುಗಳಾಗುತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಕಾನೂನು ತರೋದು, ಜನರಿಗೆ ದಂಡ ಹಾಕೋದು ಮಾಡಿದರೆ ದಂಡ ಕಟ್ಟಲಾಗದೇ ಜನರು ಆಕ್ರೋಶ ವ್ಯಕ್ತಪಡಿಸುವುದು ಸಹಜ. ಮಾಜಿ ಸಚಿವರಾದ ಯು ಟಿ ಖಾದರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.