Asianet Suvarna News Asianet Suvarna News

ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ, ಗುತ್ತಿಗೆದಾರರ ಸಂಘದ ಆರೋಪ!

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ವಿಚಾರದಲ್ಲಿ ಸರ್ಕಾರವನ್ನು ಪ್ರಶ್ನಿಸಿರುವ ರಾಜ್ಯ ಗುತ್ತಿಗೆದಾರರ ಸಂಘ, ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 1 ತಿಂಗಳ ಕಾಲ ಕರ್ನಾಟಕದಲ್ಲಿ ಕೆಲಸಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ.
 

First Published Apr 13, 2022, 3:36 PM IST | Last Updated Apr 13, 2022, 3:36 PM IST

ಬೆಂಗಳೂರು (ಏ.13): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ (Contractors Association) ಸಂಘ ಸೆಡ್ಡು ಹೊಡೆದಿದೆ. ಇಡೀ ಕರ್ನಾಟಕದಲ್ಲಿ ಒಂದು ತಿಂಗಳು ಯಾವುದೇ ಕೆಲಸ ಮಾಡುವುದಿಲ್ಲ ಎಂದು ಸಂಘ ಎಚ್ಚರಿಸಿದೆ.

ನಮ್ಮ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು. ಈ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರಿಗೆ 15 ದಿನಗಳ ಗಡವು ನೀಡಿದ್ದೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ (Kempanna) ಬುಧವಾರ ಹೇಳಿದೆ. 

ಈಶ್ವರಪ್ಪ ರಾಜೀನಾಮೆಯಷ್ಟೆನಾ? ಅರೆಸ್ಟ್‌ ಆಗ್ತಾರಾ.? ಸಾಧ್ಯತೆಗಳ ಬಗ್ಗೆ ವಕೀಲರ ಮಾತು

ಮುಖ್ಯಮಂತ್ರಿಯ ಕಛೇರಿಯಲ್ಲೂ ಭ್ರಷ್ಟಾಚಾರವಿದೆ. ಟೆಂಡರ್ ತೆಗೆದುಕೊಳ್ಳೋಕೂ 5 ಪರ್ಸೆಂಟ್ ಕಮೀಷನ್ ಕೊಡ್ಬೇಕು. ಅದರಲ್ಲೂ ನೀರಾವರಿ ಇಲಾಖೆಯಲ್ಲಿ ಕಂಡು ಕೇಳರಿಯದಷ್ಟು ಭ್ರಷ್ಟಾಚಾರವಿದೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಸಂತೋಷ್ ವಿರುದ್ಧ ರೌಡಿಗಳನ್ನು ಬಿಟ್ಟು ಕಿರುಕುಳ ನೀಡಿದ್ದಾರೆ. ಒಟ್ಟಾರೆ ಇದೊಂದು ರೌಡಿಸಂ ಸರ್ಕಾರ. ನಮ್ಮ ಬಳಿ ಭ್ರಷ್ಟಾಚಾರದ ದಾಖಲೆಗಳಿವೆ ಎಂದು ಹೇಳಿದ್ದಾರೆ.