ಕೊರೊನಾ ಕಂಟ್ರೋಲ್‌ಗೆ ಟಾಸ್ಕ್‌ಫೊರ್ಸ್ ರಚನೆ, ಮನೆ ಮನೆಗೂ ಬಂದು ಸರ್ವೆ

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ, ಸೋಂಕು ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿರುವ ಬಗ್ಗೆ, ಸೋಂಕಿತರ ಬಗ್ಗೆ ಮನೆ ಮನೆಗೂ ಬಂದು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
 

First Published Apr 8, 2021, 5:06 PM IST | Last Updated Apr 8, 2021, 5:06 PM IST

ಬೆಂಗಳೂರು (ಏ. 08): ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ, ಸೋಂಕು ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿರುವ ಬಗ್ಗೆ, ಸೋಂಕಿತರ ಬಗ್ಗೆ ಮನೆ ಮನೆಗೂ ಬಂದು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

'ಬೆಂಗಳೂರಿನಲ್ಲಿ ಕಳೆದ 1 ತಿಂಗಳಿಂದ ಸೋಂಕು ಹೆಚ್ಚಳವಾಗುತ್ತಿದೆ. ಈಗಾಗಲೇ 250 ಆಂಬುಲೆನ್ಸ್ ಸಿದ್ದವಾಗಿದೆ. ಪ್ರತಿ ವಾರ್ಡ್‌ಗೂ ಒಂದೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ' ಎಂದಿದ್ಧಾರೆ.