ಮಂಕಿಪಾಕ್ಸ್ : ಅಗತ್ಯ ಕ್ರಮಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್‌ರಿಂದ ಮಹತ್ವದ ಸೂಚನೆ
ಮಂಕಿ ಪಾಕ್ಸ್ ಅನೇಕ ದೇಶಗಳಲ್ಲಿ ಪತ್ತೆಯಾಗ್ತಿದೆ. WHO ಮಂಕಿಪಾಕ್ಸ್ ವಿಚಾರವನ್ನು ಹೆಲ್ತ್ ಎಮರ್ಜೆನ್ಸಿ ಅಂತ ಘೋಷಣೆ ಮಾಡಿದೆ. ಈ ಸೋಂಕು ಕೊರೊನಾ ರೀತಿ ವೇಗವಾಗಿ ಹರಡೋದಿಲ್ಲ. ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮುಟ್ಟಿದರೆ ಹರಡೋ ಸಾಧ್ಯ ಇದೆ.
ಬೆಂಗಳೂರು (ಜು. 25): ಮಂಕಿ ಪಾಕ್ಸ್ ಅನೇಕ ದೇಶಗಳಲ್ಲಿ ಪತ್ತೆಯಾಗ್ತಿದೆ. WHO ಮಂಕಿಪಾಕ್ಸ್ ವಿಚಾರವನ್ನು ಹೆಲ್ತ್ ಎಮರ್ಜೆನ್ಸಿ ಅಂತ ಘೋಷಣೆ ಮಾಡಿದೆ. ಈ ಸೋಂಕು ಕೊರೊನಾ ರೀತಿ ವೇಗವಾಗಿ ಹರಡೋದಿಲ್ಲ. ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮುಟ್ಟಿದರೆ ಹರಡೋ ಸಾಧ್ಯ ಇದೆ. ರಾಜ್ಯದಲ್ಲಿ ಮಂಕಿಪಾಕ್ಸ್ ಪ್ರಕರಣ ಕಂಡು ಬಂದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಅಂತ ಈಗಾಗಲೇ ಸೂಚನೆ ಕೊಡಲಾಗಿದೆ. ಸೋಂಕು ಬಂದ ವ್ಯಕ್ತಿಗೆ ಐಸೋಲೇಟ್ ಮಾಡಬೇಕು. ಆತಂಕ ಪಡುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದಲ್ಲಿ ನಾವು ಎಚ್ಚರಿಕೆಯಿಂದ ಇದ್ದೇವೆ. ಮಂಕಿಪಾಕ್ಸ್ ವಿಚಾರವಾಗಿ ಸಭೆಗಳನ್ನು ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ದೆಹಲಿಯಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿರುವ ವ್ಯಕ್ತಿಗೆ ಯಾವುದೇ ಟ್ರಾವೆಲ್ ಇಸ್ಟ್ರಿ ಇಲ್ಲ ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದರು.