Asianet Suvarna News Asianet Suvarna News

ದಸರಾ ನೆಪದಲ್ಲಿ ಪ್ರಯಾಣಿಕರಿಂದ ಸುಲಿಗೆ: 12ಕ್ಕೂ ಹೆಚ್ಚು ಕಡೆ RTO ಅಧಿಕಾರಿಗಳ ದಾಳಿ

ದಸರಾ ಹಬ್ಬದ ನೆಪದಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಕೇಸ್‌ ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ 170 ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

Oct 2, 2022, 11:37 AM IST

ದಸರಾ ಹಬ್ಬದ ನೆಪದಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನಲ್ಲಿ ಆರ್‌ಟಿಒ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರೋರಾತ್ರಿ ಖಾಸಗಿ ಬಸ್‌ ಮಾಲೀಕರಿಗೆ ಆರ್‌ಟಿಒ ಅಧಿಕಾರಿಗಳು ಶಾಕ್‌ ಕೊಟ್ಟಿದ್ದು, ನಗರದ 12ಕ್ಕೂ ಹೆಚ್ಚು ಕಡೆ ಆರ್‌ಟಿಒ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಆನಂದ್ ರಾವ್‌ ಸರ್ಕಲ್‌, ಮಡಿವಾಳ, ಗೊರಗುಂಟೆಪಾಳ್ಯ ಸೇರಿ ವಿವಿಧೆಡೆ ಖಾಸಗಿ ಬಸ್‌ಗಳ ಮೇಲೆ ದಾಲಿ ನಡೆಸಿ ಅಧಿಕಾರಿಗಳು ಕೇಸ್‌ ದಾಖಲಿಸಿಕೊಂಡಿದ್ದಾರೆ. ನಿನ್ನೆ 170 ಕ್ಕೂ ಹೆಚ್ಚು ಪ್ರಕರಣವನ್ನು ಆರ್‌ಟಿಒ ಅಧಿಕಾರಿಗಳು ದಾಕಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 2 - 3 ದಿನಗಳಿಂದಲೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.