Asianet Suvarna News Asianet Suvarna News

ರಾಷ್ಟ್ರೋತ್ಥಾನ ಪರಿಷತ್ತು ನೂತನ ಆಸ್ಪತ್ರೆ ಉದ್ಘಾಟನೆ: ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ

ಬೆಂಗಳೂರಿನ ಆರ್‌.ಆರ್‌ ನಗರದಲ್ಲಿ ರಾಷ್ಟ್ರೋತ್ಥಾನ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆಯಾಗಿದೆ. ಇದು ಬಡವರ ಪಾಲಿಗೆ ಆಶಾಕಿರಣವಾಗಲಿದೆ.

ಆರೋಗ್ಯ ಕ್ಷೇತ್ರದತ್ತ ರಾಷ್ಟ್ರೋತ್ಥಾನ ಪರಿಷತ್ತು ದಾಪುಗಾಲಿಡುತ್ತಿದ್ದು, ನೂತನ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. 19 ಜನರಲ್‌ ಎಮರ್ಜೆನ್ಸಿ ಮಕ್ಕಳ ವಾರ್ಡ ಸೇರಿ 162 ಹಾಸಿಗೆಯುಳ್ಳ ಆಸ್ಪತ್ರೆ ಉದ್ಘಾಟನೆಯಾಗಿದೆ.
ಒಂದೇ ಸೂರಿನಡಿ ಆಧುನಿಕ ವೈದ್ಯ ಪದ್ಧತಿ, ಆಲೋಪತಿ ಹಾಗೂ ಆಯುರ್ವೇದ ಚಿಕಿತ್ಸೆ ಇರಲಿದೆ. ದಿ. ಮೈ. ಜಯದೇವ ನೆನಪಿಗಾಗಿ ಆಸ್ಪತ್ರೆ ಸ್ಥಾಪನೆಯಾಗಿದ್ದು, ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ನಿರ್ಧಾರ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸೂತ್ತೂರು ಶ್ರೀ, ಸುಧಾಮೂರ್ತಿ ಹಾಗೂ ದತ್ತಾತ್ರೇಯ ಹೊಸಬಾಳೆ ಭಾಗಿಯಾಗಿದ್ದರು.