Puneeth and Politics: ರಾಜಕೀಯಕ್ಕೆ ಬರುವಂತೆ ಪ್ರಧಾನಿ ಮೋದಿಯಿಂದ ಅಪ್ಪುಗೆ ಬಂದಿತ್ತು ಆಹ್ವಾನ!
ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನಗಳು ನಡೆದಿತ್ತು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರು (ನ. 23): ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನಗಳು ನಡೆದಿತ್ತು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಳೆದ ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯಕ್ಕೆ (Politics) ಬರುವಂತೆ ಪುನೀತ್‌ಗೆ ಪ್ರಧಾನಿ ಮೋದಿ (Narendra Modi) ಆಹ್ವಾನ ನೀಡಿದ್ದರಂತೆ! ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಹಾಗು ನಿರ್ಮಾಪಕ ಎಸ್. ವಿ ಬಾಬು, ಹಾಗೂ ನಟ ಬಿಜೆಪಿ ಮುಖಂಡ ಜಗ್ಗೇಶ್ (Jaggesh) ಮೂಲಕ ಆಹ್ವಾನ ಕೊಟ್ಟಿದ್ದರಂತೆ. ಆದರೆ ನನಗೆ ರಾಜಕೀಯ ಆಸಕ್ತಿ ಇಲ್ಲ. ನಾನು ತಂದೆ ರಾಜ್ ಕುಮಾರ್ ಹಾದಿಯಲ್ಲೇ ಸಾಗುತ್ತೇನೆ ಎಂದಿದ್ರಂತೆ ಅಪ್ಪು.
Farm Law Repeal : ಚುನಾವಣೆಗೆ ಹೆದರಿ ಕೃಷಿಕಾಯ್ದೆ ಹಿಂಪಡೆದರಾ ಮೋದಿ..?
ಅಪ್ಪು ರಾಜಕೀಯ ಪ್ರವೇಶದ ಬಗ್ಗೆ ನಿರ್ಮಾಪಕ ಎಸ್ ವಿ ಬಾಬು ಪ್ರತಿಕ್ರಿಯಿಸಿದ್ಧಾರೆ. ನಾನು, ಶರ್ಮ, ಆಶಿಶ್ ಶರ್ಲಾ ಪುನೀತ್ ಮನೆಗೆ ಹೋಗಿ ರಾಜಕೀಯದ ಬಗ್ಗೆ ಮಾತನಾಡಿದೆವು. ಆಗ ರಾಜಕೀಯಕ್ಕೆ ಬನ್ನಿ ಅಂತ ಕರೆದೆವು. ಕೈ ಮುಗಿದು ನಗು ನಗುತ್ತಾ ಒಳಗೆ ಹೋದ್ರು. ಆ ಬಳಿಕ ಪಿಎಂ ಮೋದಿ ಅವರನ್ನ ಭೇಟಿ ಆಗೋಕೆ ಸಮಯ ನಿಗಧಿ ಮಾಡಿದೆವು. ಬಳಿಕ ಅಶ್ವಿನಿ ಹಾಗು ಪುನೀತ್ ಮೋದಿಯವರನ್ನ ಭೇಟಿ ಮಾಡಿದ್ರು. ಪುನೀತ್ ಯಾವುದೋ ಒಂದು ಪಕ್ಷಕ್ಕೆ ಸೀಮಿತ ಅಲ್ಲ. ಎಲ್ಲರನ್ನೂ ಪ್ರಿತಿಸುತ್ತಿದ್ದರು' ಎಂದರು.