ಕೋವಿಡ್ ವಿರುದ್ಧ ಹೋರಾಟಕ್ಕೆ ಈ 3 ಅಸ್ತ್ರಗಳನ್ನು ಪ್ರಯೋಗಿಸಿ, ಡೀಸಿಗಳಿಗೆ ಮೋದಿ ಸಲಹೆ
- ರಾಜ್ಯದ ಸಿಎಂ, 17 ಡೀಸಿ ಜೊತೆ ಮೋದಿ ಚರ್ಚೆ
- ಜಿಲ್ಲಾಧಿಕಾರಿಗಳನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ 'ಫೀಲ್ಡ್ ಕಮಾಂಡರ್'ಗಳೆಂದು ಶ್ಲಾಘನೆ
- ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಒತ್ತು
ಬೆಂಗಳೂರು (ಮೇ. 19): ಕೋವಿಡ್ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಹಲವು ಸಲಹೆ-ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿಗಳನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ ಫೀಲ್ಡ್ ಕಮಾಂಡರ್‌ಗಳೆಂದು ಶ್ಲಾಘಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸ್ಥಳೀಯ ಕಂಟೈನ್ಮೆಂಟ್ ವಲಯ ಸೃಷ್ಟಿ, ಟೆಸ್ಟಿಂಗ್ ಹೆಚ್ಚಿಸುವಿಕೆ, ಹಾಗೂ ಜನರ ಜೊತೆ ಸಂಪೂರ್ಣ ಮಾಹಿತಿ ಹಂಚಿಕೊಳ್ಳುವಿಕೆ ಇವು ಕೋವಿಡ್ ವಿರುದ್ಧದ ಹೋರಾಟಕ್ಕೆ ಪ್ರಮುಖ ಅಸ್ತ್ರಗಳು ಎಂದರು.