Asianet Suvarna News Asianet Suvarna News

Okkaliga Association Election: ನಿರ್ದೇಶಕ ಸ್ಥಾನದ ಕಣದಲ್ಲಿ ಭಾರತಿ ವಿ

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ (Okkaliga Association Election)  ಭಾನುವಾರ (ಡಿ. 12) ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ. 

First Published Dec 11, 2021, 2:49 PM IST | Last Updated Dec 11, 2021, 2:49 PM IST

ಬೆಂಗಳೂರು (ಡಿ. 11): ರಾಜ್ಯ ಒಕ್ಕಲಿಗರ ಸಂಘದ (Okkaliga Association Election)  ಕಾರ್ಯಕಾರಿ ಸಮಿತಿಗೆ ಭಾನುವಾರ (ಡಿ. 12) ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ. 

ರಾಜ್ಯಾದ್ಯಂತ ಒಟ್ಟು 35 ಸ್ಥಾನಗಳಿಗೆ 11 ಜಿಲ್ಲೆಯಲ್ಲಿ ಮತದಾನ (Voting) ನಡೆಯಲಿದ್ದು, 1049 ಮತ ಕೇಂದ್ರಗಳನ್ನು ಸ್ಥಾಪಿಲಾಗಿದೆ. 221 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಪ್ರಮುಖವಾಗಿ 7 ಸಿಂಡಿಕೇಟ್‌ಗಳನ್ನು ಮಾಡಿಕೊಂಡಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯ ಒಕ್ಕಲಿಗ ಸಂಘದಲ್ಲಿ ಭಾರತಿ ವಿ (Bharathi V)  ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಂಚಪ್ಪ ಗೌಡರ ಮಾರ್ಗದರ್ಶನಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಇವರ ಅಭಿವೃದ್ಧಿ ಕೆಲಸಗಳ ಬಗ್ಗೆ ವಿಶೇಷ ವರದಿ ಇಲ್ಲಿದೆ. 

Video Top Stories