Asianet Suvarna News Asianet Suvarna News

ಮೈಸೂರು ಗ್ಯಾಂಗ್ ರೇಪ್: 15 ದಿನವಾದರೂ ಕಿಂಡಿ ಮುಚ್ಚದ ಅರಣ್ಯ ಇಲಾಖೆ ಸಿಬ್ಬಂದಿ

Sep 8, 2021, 12:10 PM IST

ಮೈಸೂರು (ಸೆ. 08): ಗ್ಯಾಂಗ್ ರೇಪ್ ನಡೆದರೂ ಇನ್ನೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಚಾಮುಂಡಿ ಬೆಟ್ಟದ  ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ನಡೆದು 15 ದಿನವಾದರೂ ಅರಣ್ಯ ಇಲಾಖೆ ಸಿಬ್ಬಂದಿ ಕಿಂಡಿ ಮುಚ್ಚಿಲ್ಲ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಿಡಿಗೇಡಿಗಳು ಕಿಂಡಿ ಕೊರೆದಿದ್ಧಾರೆ. 

ಡ್ರಗ್ಸ್ ಸುಳಿಯಲ್ಲಿ ಅನುಶ್ರೀ, ಬಚಾವ್ ಮಾಡುತ್ತಿರುವ 'ಪ್ರಭಾವಿ' ಯಾರು..?

ರಾತ್ರಿ ವೇಳೆ ಪೊಲೀಸರು ನಿರಂತರ ಗಸ್ತಿನಲ್ಲಿರುತ್ತಾರೆ. ಆದರೆ ಬೆಳಗ್ಗಿನ ವೇಳೆ ಜನ ಸಂಚಾರ ವಿರಳವಾಗಿದೆ. ಹೀಗಾಗಿ ಭದ್ರತೆ ಅಗತ್ಯವಾಗಿದೆ. ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.