ಮಾಸ್ಕ್ ದಂಡ 1 ಸಾವಿರ ಕಡಿತಗೊಳಿಸಿ; ಸರ್ಕಾರಕ್ಕೆ ಪೊಲೀಸರಿಂದಲೇ ಮನವಿ

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿದ್ದರೆ ಅಂತವರಿಗೆ 1 ಸಾವಿರ ರೂ ದುಬಾರಿ ದಂಡ ಹಾಕಲಾಗುತ್ತಿದೆ. 

First Published Oct 7, 2020, 3:58 PM IST | Last Updated Oct 7, 2020, 3:58 PM IST

ಬೆಂಗಳೂರು (ಅ. 07): ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿದ್ದರೆ ಅಂತವರಿಗೆ 1 ಸಾವಿರ ರೂ ದುಬಾರಿ ದಂಡ ಹಾಕಲಾಗುತ್ತಿದೆ. ಮಾರ್ಷಲ್‌ಗಳು ರಸ್ತೆಗಿಳಿದು ಸಾರ್ವಜನಿಕರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಮಾಸ್ಕ್ ಹಾಕದೇ ಇದ್ರೆ ಜನರಿಗೊಂದು, ಜನನಾಯಕರಿಗೊಂದು ನ್ಯಾಯಾನಾ?

ಮಾರ್ಷಲ್‌ಗಳ ಜೊತೆ ಜಗಳಗಳಾಗುತ್ತಿವೆ. ಜನರ ಜೊತೆ ಗುದ್ದಾಡಿ ಪೊಲೀಸರೇ ಹೈರಾಣಾಗಿ ಹೋಗಿದ್ದಾರೆ. 1 ಸಾವಿರ ರೂ ದಂಡವನ್ನು ಕಡಿತಗೊಳಿಸುವಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಈ ಕಾನೂನನ್ನು ಜಾರಿಗೆ ತರುವಾಗ ಸರ್ಕಾರ ಸರಿಯಾಗಿ ಪ್ಲಾನ್ ಮಾಡಬೇಕಿತ್ತು. ಜನರಿಗೆ ಅರ್ಥೈಸಬೇಕಿತ್ತು. ಆ ಕೆಲಸ ಮಾಡದೇ ದಿಢೀರನೇ ದಂಡ ಹಾಕಿದರೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುವುದು ಸಾಮಾನ್ಯ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!