Asianet Suvarna News Asianet Suvarna News

ಲಾಕ್‌ಡೌನ್‌ ಪರಿಹಾರವಲ್ಲ, ಕಠಿಣ ಕ್ರಮಗಳು, ಪರ್ಯಾಯ ಮಾರ್ಗ ಬಗ್ಗೆ ಚರ್ಚೆ: ಸುಧಾಕರ್

ಬೆಂಗಳೂರಿನಲ್ಲಿ ಕೊರೋನಾ ಕೈಮೀರುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿದ್ದರೆ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ. 

First Published Apr 19, 2021, 2:12 PM IST | Last Updated Apr 19, 2021, 2:12 PM IST

ಬೆಂಗಳೂರು (ಏ. 19): ರಾಜಧಾನಿಯಲ್ಲಿ ಕೊರೋನಾ ಕೈಮೀರುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿದ್ದರೆ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಕೊರೊನಾ ಕಂಟ್ರೋಲ್‌ಗೆ ಟಫ್‌ರೂಲ್ಸ್‌ ಮಾಡದೇ ಬೇರೆ ದಾರಿಯಿಲ್ಲ: ಟಾಸ್ಕ್‌ಫೋರ್ಸ್

ಒಂದೆಡೆ ಚಿಕಿತ್ಸೆ ನೀಡಿ ನಿಯಂತ್ರಣ ಮಾಡುತ್ತಿದ್ದೇವೆ. ಮತ್ತೊಂದೆಡೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್‌ ಮಾಡಿ ನಿಯಂತ್ರಣ ಮಾಡಬೇಕಿದೆ. ದಿನ ನಿತ್ಯದ ಚಟುವಟಿಕೆಗಳು ನಡೆಯುತ್ತಿದ್ದರೆ, ಕೊರೋನಾ ನಿಯಂತ್ರಣ ಅಸಾಧ್ಯ. ಆದ್ದರಿಂದ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ. 

Video Top Stories