ಊರಿಗೆ ಯಜಮಾನ ಆದ್ರೂ ಅವನಿಗೆ ಸ್ಕೆಚ್ ರೆಡಿ ಮಾಡಿದ್ರು! ಕಂಡವರ ಉಸಾಬರಿಗೆ ಹೋಗಿದ್ದೆ ತಪ್ಪಾಯ್ತಾ?

ಈತ ತನ್ನ ಊರಿನವರಿಗೆ ದೇವರಿನಂತಿದ್ದ. ಆತನ ಜನರಿಗೆ ಏನೇ ಕಷ್ಟ ಬಂದ್ರೂ ಈತ ಅವರ ಪರ ನಿಲ್ತಿದ್ದ. ಕಷ್ಟ ಸುಖಗಳಲ್ಲಿ ಭಾಗಿಯಾಗ್ತಿದ್ದ. ಆದ್ರೆ ಇದೇ ಯಜಮಾನನ್ನ ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ದಾರೆ

Share this Video
  • FB
  • Linkdin
  • Whatsapp

ಹುಕ್ಕೇರಿ: ಆತ ಆ ಊರಿಗೆ ಯಜಮಾನಂತಿದ್ದರು. ಪರೋಪಕಾರಿ ಕಾರ್ಯದ ಮೂಲಕವೇ ತನ್ನೂರಷ್ಟೇ ಅಲ್ಲ ನೆರೆಯ ಗ್ರಾಮಗಳ ಜನರ ಮನಸ್ಸು ಗೆದ್ದಿದ್ದ. ಸಹಾಯ, ಸಹಕಾರ ಮನೋಭಾವನೆ ಮೂಲಕವೇ ಗೌರವ ಸಂಪಾದಿಸಿದ್ದ ವ್ಯಕ್ತಿತ್ವ ಅವನದ್ದು. ರಾಜಿ ಪಂಚಾಯ್ತಿಯಾಗಲಿ. ಎಂಥದ್ದೇ ಕಷ್ಟವಾಗಲಿ ಅವನೇ ಬೇಕಿತ್ತು. ಇಂಥವನು ಆವತ್ತು ಆ್ಯಕ್ಸಿಡೆಂಟ್​​​ನಲ್ಲಿ ಮೃತಪಟ್ಟಿದ್ದ. ಪಂಚಾಯ್ತಿ ಮುಗಿಸಿ ತನ್ನ ಸ್ನೇಹಿತರ ಜೊತೆ ಮನೆಕಡೆ ಹೋಗುವಾಗ್ಲೇ ಅಪಘಾತವಾಗಿ ಕೊನೆಯುಸಿರು ಎಳೆದುಬಿಟ್ಟಿದ್ದ.

ಆದ್ರೆ ಇದೇ ಕೇಸ್​​ನ ತನಿಖೆ ನಡೆಸಿದ ಪೊಲೀಸರು ಅದು ಆ್ಯಕ್ಸಿಡೇಂಟ್​​ ಅಲ್ಲ ಬದಲಿಗೆ ಕೊಲೆ ಅನ್ನೋದನ್ನ ಪತ್ತೆ ಹಚ್ಚಿದ್ರು. ಅಷ್ಟೇ ಅಲ್ಲ ಅವನ ಹೆಣಹಾಕಿದವರ ಹೆಡೆಮುರಿ ಕಟ್ಟಿದ್ರು. ಅಷ್ಟಕ್ಕೂ ಊರಿಗೇ ಯಜಮಾನದಂತಿದ್ದವನನ್ನ ಕೊಂದವರ್ಯಾರು..? ಅಂತಹ ತಪ್ಪು ಆತ ಮಾಡಿದ್ದಾದ್ರೂ ಏನು? ಒಬ್ಬ ಅಮಾಯಕನೊಬ್ಬನ ಕೊಲೆ ಮತ್ತು ಆ ಕೊಲೆಯ ರೋಚಕ ತನಿಖೆಯೇ ಇಲ್ಲಿದೆ ನೋಡಿ

Related Video