ಸಿಎಂಗೆ ಆಪ್ತರೇ ಕಂಟಕವಾದ್ರಾ?: ಸಚಿವ ಭೈರತಿ ಸುರೇಶ್‌ರನ್ನು ನಂಬಿ ತಪ್ಪು ಮಾಡಿದ್ರಾ ಸಿದ್ದು?
ಇಲ್ಲಿ ಯಾರಿಂದ ತಪ್ಪಾಯ್ತು? ಯಾರಿಂದ ಸರಿಯಾದ ಮಾಹಿತಿ ಸಿಗದೇ ಹೋಯ್ತು? ಹಾಗೆನೇ ಸಿದ್ದರಾಮಯ್ಯನವರನ್ನು ದಾರಿ ತಪ್ಪಿಸಿದ್ದು ಯಾರು ಅನ್ನೋದನ್ನು ನೋಡು ಸಮಯ ಮುಗಿದು ಹೋಯ್ತು. ಈಗೇನಿದ್ರು ಹೇಗೆ ಕಾನೂನು ಹೋರಾಟ ಮಾಡಬೇಕು ಅನ್ನೋದನ್ನ ಸಿದ್ದರಾಮಯ್ಯನವರು ತಲೆ ಕೆಡಿಸಿಕೊಳ್ಳಬೇಕಿದೆ.
ಬೆಂಗಳೂರು(ಸೆ.25): ಮುಡಾ ಕೇಸ್’ನಲ್ಲಿ ಸಿದ್ದರಾಮಯ್ಯ ದಾರಿ ತಪ್ಪಿದ್ದು ಎಲ್ಲಿ..? ‘ವಕೀಲ’ರಾಮಯ್ಯ ಕಾನೂನಿನ ಬಲೆಗೆ ಸಿಲುಕಿದ್ದು ಹೇಗೆ..?. ಜೊತೆಗಿದ್ದವರೇ ದಾರಿ ತಪ್ಪಿಸಿದ್ರಾ..? ಸಿದ್ದು ಎಡವಿದ್ದೆಲ್ಲಿ..? ರಾಮಯ್ಯ ಶಕ್ತಿಕೋಟೆಯನ್ನು ಅಲ್ಲಾಡಿಸಿದ್ದು ಅವರೇನಾ..? ಇದೆಲ್ಲವನ್ನು ನೋಡೋದೇ ಈ ಇಂದಿನ ಸುವರ್ಣ ಫೋಕಸ್ ಹೊಗಳುಭಟ್ಟರೇ ಹಾಳು ಮಾಡಿದ್ರಾ..?
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯನವರು ಹೈಕೋರ್ಟ್ ಮೊರೆ ಹೋಗಿದ್ದರು. ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇಲ್ಲಿ ಇನ್ನೊಂದು ಪ್ರಮುಖ ವಿಚಾರವೇನು ಗೊತ್ತಾ? ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರಿಗೆ ಅವರ ಸುತ್ತ ಮುತ್ತ ಇದ್ದ ಆಪ್ತರೇ ಕಂಟಕವಾದ್ರಾ ಅನ್ನೋದು ಹಾಗಿದ್ರೆ ಈ ಪ್ರಕರಣದಲ್ಲಿ ಆಪ್ತರೇ ಸಿಎಂ ಸಿದ್ದರಾಮಯ್ಯನವರನ್ನು ದಾರಿ ತಪ್ಪಿಸಿದ್ರಾ?
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮುಂದಿರುವ ದಾರಿ ಏನು? ದಾಖಲಾಗುತ್ತಾ FIR?
ಇದೆಲ್ಲವನ್ನು ನೋಡುತ್ತಿದ್ದರೆ ಸಿಎಂ ಸಿದ್ದರಾಮಯ್ಯನವರಿಗೆ ಆಪ್ತರನ್ನು ನಂಬಿದ್ದಕ್ಕಾಗಿಯೇ ಈ ಸಂಕಷ್ಟ ಎದುರಾಯ್ತಾ ಎಂದೆನಿಸುತ್ತಿದೆ. ಇಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಿದ್ದು ಆಪ್ತರು, ಮುಡಾ ಅಧ್ಯಕ್ಷರೂ ಸಿಎಂ ಆಪ್ತರೇ. ಆದರೂ ಅವರಿಗೆ ಸರಿಯಾದ ಮಾಹಿತಿ ಸಿಗಲ್ಲಿಲ್ಲವೆಂದ್ರೆ ಇನ್ನೇನು ಹೇಳಬೇಕು? ಇವರಷ್ಟೇ ಅಲ್ಲ ಈ ಪ್ರಕರಣದಲ್ಲಿ ಸಿದ್ದು ದಾರಿ ತಪ್ಪಿಸಿದ್ದಾರೆ ಅನ್ನೋ ಅನುಮಾನದ ಲಿಸ್ಟ್‌ನಲ್ಲಿ ಇನ್ನೂ ಇದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರು ಇಂದು ಈ ಸಂಕಷ್ಟಕ್ಕೆ ಸಿಲುಕಲು ಖುದ್ದು ಅವರ ಬಾಮೈದನೂ ಕಾರಣನಾಗಿದ್ದಾನೆ ಎಂಬ ಆರೋಪವೂ ಇದೆ. ಯಾಕೆಂದ್ರೆ ಅವರು ಕೊಂಡುಕೊಂಡ ಜಮೀನು ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರ ಬಾಮೈದ ಬಹು ಮುಖ್ಯವಾದ ಸಂಗತಿಯೊಂದನ್ನು ಮುಚ್ಚಿಟ್ಟದರು ಎಂದು ಹೇಳಲಾಗುತ್ತಿದೆ
ಒಟ್ಟಿನಲ್ಲಿ ಮುಡಾ ಪ್ರಕರಣ ಸಿದ್ದರಾಮಯ್ಯನವರಿಗೆ ಮತ್ತಷ್ಟು ಬಿಡಿಗಿಟ್ಟನ್ನು ಹಾಕಿದೆ. ಹಾಗಂತ ಸಿದ್ದರಾಮಯ್ಯವರು ಸುಮ್ಮನೆ ಕೂರೋದಿಲ್ಲ. ಅವರೂ ಕಾನೂನು ಹೋರಾಟ ಮುಂದುವರೆಸುತ್ತಾರೆ. ಆದ್ರೆ, ಸಿಎಂ ಸಿದ್ದು ಅವರ ಮುಂದಿನ ಕಾನೂನು ಹೋರಾಟದಲ್ಲೂ ಹಿನ್ನಡೆಯಾದ್ರೆ ಏನ್ ಮಾಡ್ತಾರೆ?
ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!
ಮುಡಾ ಪ್ರಕರಣದ ಸುದ್ದಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಪಾಳೆಯದಲ್ಲಿ ಸಿಎಂ ಖುರ್ಚಿಗಾಗಿ ರೇಸ್ ಶುರುವಾಗಿತ್ತು. ಸಿದ್ದರಾಮಯ್ಯವರ ಒಂದು ವೇಳೆ ರಾಜೀನಾಮೆ ನೀಡಿದ್ರೆ ಸಿಎಂ ಸೀಟಿಗೆ ನಾ ಮುಂದು ತಾ ಮುಂದು ಎಂದು ಸಿದ್ದವಾಗಿಯೇ ಇದ್ದಾರೆ. ಆದ್ರೆ, ಈ ಪ್ರಕರಣ ಸಿಎಂ ರಾಜೀನಾಮೆ ಕೊಡುವವರೆಗೂ ಹೋಗುತ್ತಾ..?
ಇಲ್ಲಿ ಯಾರಿಂದ ತಪ್ಪಾಯ್ತು? ಯಾರಿಂದ ಸರಿಯಾದ ಮಾಹಿತಿ ಸಿಗದೇ ಹೋಯ್ತು? ಹಾಗೆನೇ ಸಿದ್ದರಾಮಯ್ಯನವರನ್ನು ದಾರಿ ತಪ್ಪಿಸಿದ್ದು ಯಾರು ಅನ್ನೋದನ್ನು ನೋಡು ಸಮಯ ಮುಗಿದು ಹೋಯ್ತು. ಈಗೇನಿದ್ರು ಹೇಗೆ ಕಾನೂನು ಹೋರಾಟ ಮಾಡಬೇಕು ಅನ್ನೋದನ್ನ ಸಿದ್ದರಾಮಯ್ಯನವರು ತಲೆ ಕೆಡಿಸಿಕೊಳ್ಳಬೇಕಿದೆ.