Asianet Suvarna News Asianet Suvarna News

Night Curfew: ಸಾಧಕ-ಬಾಧಕಗಳನ್ನು ನೋಡಿಯೇ ನಿರ್ಧಾರ, ಸಾರ್ವಜನಿಕರು ಸಹಕರಿಸಿ: ಡಾ. ಸುಧಾಕರ್

ಒಮಿಕ್ರೋನ್‌ ಭೀತಿ (Omicron Threat) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ ಇಂದಿನಿಂದ ರಾತ್ರಿ 10 ಗಂಟೆಯಿಂದ ಜಾರಿಯಾಗಲಿದ್ದು, ಮುಂದಿನ ಹತ್ತು ದಿನಗಳ ಕಾಲ ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ.

 

First Published Dec 28, 2021, 3:06 PM IST | Last Updated Dec 28, 2021, 3:06 PM IST

ಬೆಂಗಳೂರು (ಡಿ. 28): ಒಮಿಕ್ರೋನ್‌ ಭೀತಿ (Omicron Threat) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ ಇಂದಿನಿಂದ ರಾತ್ರಿ 10 ಗಂಟೆಯಿಂದ ಜಾರಿಯಾಗಲಿದ್ದು, ಮುಂದಿನ ಹತ್ತು ದಿನಗಳ ಕಾಲ ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ.

Omicron Varinat: ದುಡ್ಡು, ಪ್ರಭಾವ ಇದ್ರೆ ಬೆಡ್ ಸಿಗಲ್ಲ, ಬೆಡ್ ಬುಕಿಂಗ್ ದಂಧೆಗೆ ಬ್ರೇಕ್

ನೈಟ್‌ ಕರ್ಫ್ಯೂಗೆ (Night Curfew) ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ. 'ಸರ್ಕಾರ ಒಂದು ನಿರ್ಧಾರ ಮಾಡುವ ಮುನ್ನ ಸಾಧಕ- ಬಾಧಕಗಳನ್ನು ನೋಡಿಯೇ ನಿರ್ಧರಿಸುತ್ತದೆ. ಸುಖಾಸುಮ್ಮನೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ವಿನಾಕಾರಣ ವಿರೋಧ ಮಾಡುವುದು ಸರಿಯಲ್ಲ. ಸಾರ್ವಜನಿಕರು ಸಹಕರಿಸಬೇಕು' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Dr Sudhakar) ಹೇಳಿದ್ದಾರೆ.