Asianet Suvarna News

ದೇಶದಲ್ಲೇ ಮೊದಲು; ಕೊರೋನಾಗೆ ಬಲಿಯಾದ ಬಡವರ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ

Jun 15, 2021, 10:02 AM IST

ಬೆಂಗಳೂರು (ಜೂ. 15): ಕೊರೋನಾ ದಿಂದ ಮನೆಗೆ ಆಧಾರವಾಗಿದ್ದ ಅಥವಾ ವಯಸ್ಕ ವ್ಯಕ್ತಿಯನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ ಪರಿಹಾರವನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ಸಿಎಂ ಬಿಎಸ್‌ವೈ ಘೋಷಿಸಿದ್ದಾರೆ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ 250 ರಿಂದ 300 ಕೋಟಿ ವ್ಯಯಿಸಲಾಗುತ್ತಿದೆ ಎಂದಿದ್ದಾರೆ. 

ಪದೇ ಪದೇ ಜಮೀರ್ ಕೊಟೆ ಚಾಮರಾಜಪೇಟೆಗೆ ಹೋಗ್ತಿರೋದ್ಯಾಕೆ ಸಿದ್ದರಾಮಯ್ಯ..?

ರಾಜ್ಯದಲ್ಲಿ ಜೂ. 14 ರವರೆಗೆ 33,033 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ 15 ಸಾವಿರ ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ ಪರಿಹಾರ ಪಡೆಯಲು ವಯಸ್ಸಿನ ಸ್ಪಷ್ಟತೆ ಸೇರಿ ಹಲವು ಅಂಶಗಳ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಬೇಕಾಗುತ್ತದೆ. ಇವೆಲ್ಲದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.