Asianet Suvarna News Asianet Suvarna News

ಪದೇ ಪದೇ ಜಮೀರ್ ಕೋಟೆ ಚಾಮರಾಜಪೇಟೆಗೆ ಹೋಗ್ತಿರೋದ್ಯಾಕೆ ಸಿದ್ದರಾಮಯ್ಯ..?

Jun 14, 2021, 1:51 PM IST

ಬೆಂಗಳೂರು (ಜೂ. 14): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆಗೆ ಚಾಮರಾಜಪೇಟೆ ಹೆಸರು ಕೇಳಿ ಬರುತ್ತಿದೆ. ಸ್ಪರ್ಧೆಗೆ ಅಖಾಡ ಸಿದ್ಧವಾಗುತ್ತಿದೆ. ಇಲ್ಲಿಯವರೆಗೆ ಕೇಳಿಬರುತ್ತಿದ್ದ ಮಾತಿಗೆ ಈಗ ಇನ್ನಷ್ಟು ಪುಷ್ಠಿ ಸಿಕ್ಕಿದೆ.

ಹೈಕಮಾಂಡ್ ಶ್ರೀರಕ್ಷೆ, ಭಿನ್ನಮತರ ಅಸಮಾಧಾನ; ಸಿಎಂ ವಿರುದ್ಧ ಸ್ಫೋಟಗೊಳ್ಳುತ್ತಾ ಬಂಡಾಯ..?

ಚಾಮರಾಜಪೇಟೆಯಲ್ಲಿ ಪೌರಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆಗೆ ಸಿದ್ದರಾಮಯ್ಯ ಆಗಮಿಸಿದ್ದರು. ಪದೇ ಪದೇ ಜಮೀರ್ ಕರೆಯುತ್ತಾರೆ, ಹಾಗಾಗಿ ಬರ್ತೀನ್ರಿ ಎಂದಿದ್ದಾರೆ. ಜೊತೆಗೆ ಸಾಹೇಬರು ಚಾಮರಾಜಪೇಟೆಯಿಂದ ಸ್ಪರ್ಧಿಸುತ್ತಾರೆ ಎಂದು ಪದೇ ಪದೇ ಜಮೀರ್ ಹೇಳುವುದಕ್ಕೂ, ಸಿದ್ದರಾಮಯ್ಯ ಮಾತಿಗೂ ಸಾಮ್ಯತೆ ಕಂಡು ಬರುತ್ತಿದೆ. ಹಾಗಾದರೆ ಸಿದ್ದು ಸ್ಪರ್ಧೆ ಚಾಮರಾಜಪೇಟೆಯಿಂದಲಾ.? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್