ಹಂತಕರನ್ನು ಕೊಲ್ಲಬೇಕು ಅಂತ ನಮಗೂ ಅನ್ಸತ್ತೆ, ಆದರೆ ಸರ್ಕಾರ ಭಾವನೆ ಮೇಲೆ ನಡೆಯಲ್ಲ: ಸಿ ಟಿ ರವಿ

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಾಲು ಸಾಲು ಹತ್ಯೆಗಳಾಗಿವೆ. ಆದರೂ ಏನೂ ಆಗಿಲ್ಲ ಎಂಬಂತೆ ಅವರಿದ್ದರು. ನಮ್ಮ ಸರ್ಕಾರ ಸಂವೇದನಾ ರಹಿತವಲ್ಲ. ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ನಮಗೂ ಭಾವನೆಗಳಿವೆ. ಆದರೆ ಸರ್ಕಾರ ಕಾನೂನಿನ ಆಧಾರದ ಮೇಲೆ ನಡೆಯುತ್ತೆ ಎಂದು ಸಿಟಿ ರವಿ ಹೇಳಿದ್ದಾರೆ. 
 

First Published Feb 22, 2022, 4:15 PM IST | Last Updated Feb 22, 2022, 5:13 PM IST

ಬೆಂಗಳೂರು (ಫೆ. 22): ಸಿದ್ದರಾಮಯ್ಯ (Siddaramaiah) ಸರ್ಕಾರ ಇದ್ದಾಗ ಸಾಲು ಸಾಲು ಹತ್ಯೆಗಳಾಗಿವೆ. ಆದರೂ ಏನೂ ಆಗಿಲ್ಲ ಎಂಬಂತೆ ಅವರಿದ್ದರು. ನಮ್ಮ ಸರ್ಕಾರ ಸಂವೇದನಾ ರಹಿತವಲ್ಲ. ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ನಮಗೂ ಭಾವನೆಗಳಿವೆ. ಆದರೆ ಸರ್ಕಾರ ಕಾನೂನಿನ ಆಧಾರದ ಮೇಲೆ ನಡೆಯುತ್ತೆ ಎಂದು ಸಿಟಿ ರವಿ (CT Ravi) ಹೇಳಿದ್ದಾರೆ. 

Shivamogga: ಹರ್ಷನ ಹತ್ಯೆಗೆ ಕಾರಣವೇನು..? ಸಹೋದರಿ ಹೀಗೆ ಹೇಳ್ತಾರೆ

ಹರ್ಷ ಕೊಲೆಯಾದಾಗ ಕೂಡಲೇ ಎಸ್‌ಪಿಗೆ ಕರೆ ಮಾಡಿ ಮಾತನಾಡಿದೆ.  ಜೊತೆಗೆ ಸುತ್ತಮುತ್ತಲಿನ ಜನರನ್ನು ವಿಚಾರಿಸಿದೆವು. ಆಗ ಅವರು ಮುಸ್ಲಿಂ ಗೂಂಡಾಗಳೇ ಕೊಲೆ ಮಾಡಿದ್ದು ಎಂದಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. 

‘ನಮ್ಮ ಸಜ್ಜನ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ.  ಶಿವಮೊಗ್ಗದಲ್ಲಿ ಎಂದೂ ಈ ಮುಸ್ಲಿಂ ಗೂಂಡಾಗಳು ಬಾಲಬಿಚ್ಚಿರಲಿಲ್ಲ. ಆದರೆ ಮೊನ್ನೆ ಶಿವಮೊಗ್ಗದ ಸರ್ಕಾರಿ ಶಾಲೆ ಆವರಣದಲ್ಲಿ ರಾಷ್ಟ್ರ ಧ್ವಜ ಇಳಿಸಿ ಭಗವಾ ಧ್ವಜ ಹಾರಿಸಿದ್ದಾರೆ. 50 ಲಕ್ಷ ಕೇಸರಿ ಶಾಲು ಹಂಚಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರು ನೀಡಿದ ಪ್ರಚೋದನಾಕಾರಿ ಹೇಳಿಕೆಯಿಂದ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಿದೆ’ ಎಂದು ಈಶ್ವರಪ್ಪ ಹೇಳಿದ್ದರು.