Asianet Suvarna News Asianet Suvarna News

Omicron Variant: ಬಿಗ್ ರಿಲೀಫ್! ರಾಜ್ಯದ ಐವರು ಸೋಂಕಿತರಲ್ಲಿ ಒಮಿಕ್ರಾನ್ ಪತ್ತೆಯಿಲ್ಲ

ಒಮಿಕ್ರೋನ್ ಸೋಂಕಿತನ (Omicron Variant) ಸಂಪರ್ಕದಲ್ಲಿದ್ದು ಸೋಂಕು ದೃಢಪಟ್ಟಿದ್ದ ಐವರಲ್ಲಿ ಮೂವರ ಕೊರೋನಾ ಆರ್‌ಟಿಪಿಸಿಆರ್ (RTPCR) ವರದಿ ನೆಗೆಟಿವ್ ಬಂದಿದೆ.

ಬೆಂಗಳೂರು (ಡಿ. 07): ಒಮಿಕ್ರೋನ್ ಸೋಂಕಿತನ (Omicron Variant) ಸಂಪರ್ಕದಲ್ಲಿದ್ದು ಸೋಂಕು ದೃಢಪಟ್ಟಿದ್ದ ಐವರಲ್ಲಿ ಮೂವರ ಕೊರೋನಾ (Covid 19)  ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದಿದೆ.

ಯಾರೊಬ್ಬರಿಗೂ ಯಾವುದೇ ರೋಗ ಲಕ್ಷಣಗಳಿಲ್ಲ. ಎಲ್ಲರೂ ಅರೋಗ್ಯವಾಗಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ನಿರ್ದೇಶಕ ಡಾ. ಮನೋಜ್ ತಿಳಿಸಿದ್ದಾರೆ. ಒಮಿಕ್ರೋನ್‌ ಸೋಂಕು ಪತ್ತೆಯಾಗಿದ್ದ ಬೆಂಗಳೂರಿನ 46 ವರ್ಷದ ವೈದ್ಯ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

 

Video Top Stories