Asianet Suvarna News Asianet Suvarna News

ಧಾರವಾಡ, ಬೀದರ್‌ನಲ್ಲಿ ಗ್ರಹಣ ಕಾಲದಲ್ಲಿಯೇ ಉಪಹಾರ ಸೇವಿಸಿ ನಂಬಿಕೆಗೆ ಸವಾಲ್..!

ಗ್ರಹಣವನ್ನು ಕೆಲವರು ವೈಜ್ಞಾನಿಕವಾಗಿ ನೋಡಿದರೆ, ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುತ್ತಾರೆ. ಗ್ರಹಣ ಕಾಲದಲ್ಲಿ ಏನನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಸಡ್ಡು ಹೊಡೆಯಲು ಎಂಬಂತೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪ್ಪಿಟ್ಟು ಸೇವನೆ ಮಾಡಿದ್ದಾರೆ.  ಕೇಂದ್ರದ ನಿರ್ದೇಶಕ ಕೆ.ಬಿ.ಗುಡಸಿ ನೇತೃತ್ವದಲ್ಲಿ ಉಪಹಾರ ಸೇವನೆ ಮಾಡಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೆನ್ನುವುದನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆ. 

ಬೆಂಗಳೂರು (ಜೂ. 21): ಗ್ರಹಣವನ್ನು ಕೆಲವರು ವೈಜ್ಞಾನಿಕವಾಗಿ ನೋಡಿದರೆ, ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುತ್ತಾರೆ. ಗ್ರಹಣ ಕಾಲದಲ್ಲಿ ಏನನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಸಡ್ಡು ಹೊಡೆಯಲು ಎಂಬಂತೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪ್ಪಿಟ್ಟು ಸೇವನೆ ಮಾಡಿದ್ದಾರೆ.  ಕೇಂದ್ರದ ನಿರ್ದೇಶಕ ಕೆ.ಬಿ.ಗುಡಸಿ ನೇತೃತ್ವದಲ್ಲಿ ಉಪಹಾರ ಸೇವನೆ ಮಾಡಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೆನ್ನುವುದನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆ. 

ಸೂರ್ಯಗ್ರಹಣ: ಕಲಬುರಗಿಯಲ್ಲಿನ ತಿಪ್ಪೆಗುಂಡಿಗೆ ಬಿಗಿ ಪೊಲೀಸ್‌ ಬಂದೋಬಸ್ತ್‌..!

ಬೀದರ್‌ನ ಶಿವನಗರದ ಬಳಿ ಸೂರ್ಯಗ್ರಹಣ ವೀಕ್ಷಣೆ ವೇಳೆ ಉಪಹಾರ ಸೇವನೆ ಮಾಡಲಾಗಿದೆ.  ಮೌಢ್ಯತೆ ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆಯಿಂದ ಗ್ರಹಣ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರು, ಮಕ್ಕಳು, ಆಸಕ್ತರು ಸೂರ್ಯಗ್ರಹಣ ವೀಕ್ಷಣೆ ಮಾಡಿ ಉಪಹಾರ ಸೇವಿಸಿದರು.

Video Top Stories