Asianet Suvarna News Asianet Suvarna News

ಊಟ ತಿನ್ನಲು ತಯಾರಿಲ್ಲ, ಜೈಲಿನಲ್ಲಿ ರಾಗಿಣಿಗೆ ಬೆನ್ನು ನೋವು, ಸುಸ್ತು!

ಡ್ರಗ್ಸ್‌ ಮಾಫಿಯಾ ಪ್ರಕರಣದ ಉರುಳಿಗೆ ಸಿಲುಕಿ ಪರಪ್ಪನ ಅಗ್ರಹಾಋ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಜೀವನ ಅಯೋಮಯವಾದಂತಾಗಿದೆ. ಜೈಲಿನಲ್ಲಿರುವ ರಾಗಿಣಿ ಸಿಬ್ಬಂದಿ ಕೊಟ್ಟ ಊಟ ನಾನು ತಿನ್ನುವುದಿಲ್ಲ ಎಂದು ಹಠ ಹಿಡಿದಿದ್ದಾರೆ. 

ಬೆಂಗಳೂರು(ಸೆ.15): ಡ್ರಗ್ಸ್‌ ಮಾಫಿಯಾ ಪ್ರಕರಣದ ಉರುಳಿಗೆ ಸಿಲುಕಿ ಪರಪ್ಪನ ಅಗ್ರಹಾಋ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಜೀವನ ಅಯೋಮಯವಾದಂತಾಗಿದೆ. ಜೈಲಿನಲ್ಲಿರುವ ರಾಗಿಣಿ ಸಿಬ್ಬಂದಿ ಕೊಟ್ಟ ಊಟ ನಾನು ತಿನ್ನುವುದಿಲ್ಲ ಎಂದು ಹಠ ಹಿಡಿದಿದ್ದಾರೆ. 

ಜೈಲಿನಲ್ಲಿ ರಾಗಿಣಿಗೆ ಚಪಾತಿ, ಪಲ್ಯ, ಅನ್ನ ಹಾಗೂ ಸಾಂಬಾರನ್ನು ನೀಡಲಾಗಿತ್ತು. ಅಲ್ಲದೇ ಬೆಳಗ್ಗಿನ ತಿಂಡಿಗೆ ನೀಡಿದ್ದ ಚಿತ್ರಾನ್ನವನ್ನೂ ತಿನ್ನಲು ಹಿಂದೇಟು ಹಾಕಿದ್ದಾರೆ. ನನಗೆ ಲೋ ಶುಗರ್ ಸಮಸ್ಯೆ ಇದೆ ಹೀಗಾಗಿ ಇದನ್ನು ತಿನ್ನಲು ತಯಾರಿಲ್ಲ ಎಂದು ರಾಗಿಣಿ ಗರಂ ಆಗಿದ್ದಾರೆ. \

ಇಷ್ಟೇ ಅಲ್ಲದೇ ರಾಗಿಣಿಗೆ ಬೆನ್ನು ನೋವು ಹಾಗೂ ಸುಸ್ತು ಕಾಡಲಾರಂಭಿಸಿದ್ದು, ಜೈಲಿನಲ್ಲಿ ಡಾ. ಉಮಾ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಕುರಿತದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ