ಕೇರಳದಲ್ಲಿ ಓಣಂ ಬಳಿಕ ಸೋಂಕು ಹೆಚ್ಚಳವಾಗಿದೆ, 2 ನೇ ಅಲೆ ಬಗ್ಗೆ ಜಾಗ್ರತೆ ವಹಿಸಬೇಕು: ಡಾ. ಮಂಜುನಾಥ್

ಕೇರಳದಲ್ಲಿ ಓಣಂ ಬಳಿಕ ಮತ್ತೆ ಸೋಂಕು ಹೆಚ್ಚಳವಾಗಿದೆ. ಕೊರೊನಾ 2 ನೇ ಅಲೆ ತಪ್ಪಿಸಿಕೊಳ್ಳಲು ಹುಷಾರಾಗಿರಿ. ಇನ್ನೂ 3 ತಿಂಗಳು ಎಚ್ಚರದಿಂದಿರಿ ಎಂದು ಸುವರ್ಣ ನ್ಯೂಸ್‌ಗೆ ಡಾ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. 

First Published Oct 27, 2020, 4:50 PM IST | Last Updated Oct 27, 2020, 4:50 PM IST

ಬೆಂಗಳೂರು (ಅ. 27): ರಾಜ್ಯದಲ್ಲಿ ಕೋವಿಡ್ ಸೋಂಕು ಹೊಸ ಪ್ರಕರಣಗಳು ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿ. ಹಾಗಂತ ಮೈಮರೆಯಬೇಡಿ. ಇನ್ನಷ್ಟು ಹೆಚ್ಚಾಗಬಹುದು. ಕೇರಳದಲ್ಲಿ ಓಣಂ ಬಳಿಕ ಮತ್ತೆ ಸೋಂಕು ಹೆಚ್ಚಳವಾಗಿದೆ. ಕೊರೊನಾ 2 ನೇ ಅಲೆ ತಪ್ಪಿಸಿಕೊಳ್ಳಲು ಹುಷಾರಾಗಿರಿ. ಇನ್ನೂ 3 ತಿಂಗಳು ಎಚ್ಚರದಿಂದಿರಿ ಎಂದು ಸುವರ್ಣ ನ್ಯೂಸ್‌ಗೆ ಡಾ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. 

ಕೊರೊನಾಗೆ ವ್ಯಾಕ್ಸಿನ್ ರೆಡಿ; ಮಹಾಮಾರಿಯಿಂದ ಸದ್ಯದಲ್ಲೆ ಸಿಗಲಿದೆ ಮುಕ್ತಿ?

'ಸೋಂಕು ಇಳಿಕೆಯಾಗುತ್ತಿದೆ ಎಂದು ಪ್ರವಾಸಕ್ಕೆ ಹೋಗ್ಬೇಡಿ. ಸಭೆ ಸಮಾರಂಭಗಳಲ್ಲಿ ಗುಂಪುಗೂಡುವುದನ್ನು ಬಿಡಿ. ಮುಂದೆ ಸಾಲು ಸಾಲು ಹಬ್ಬಗಳು ಬರಲಿದೆ. ಶಾಪಿಂಗ್ ಅಂತ ಮೈಮರೆಯಬೇಡಿ' ಎಂದು ಸಲಹೆ ನೀಡಿದ್ದಾರೆ.