ದಕ್ಷಿಣ ಕನ್ನಡ ಡಿಸಿ ಕುಟುಂಬಕ್ಕೆ ಕೋವಿಡ್ ಸೋಂಕು; ಮನೆಯಲ್ಲೇ ಚಿಕಿತ್ಸೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆವಿ ರಾಜೇಂಂದ್ರ ಕುಟುಂಬಕ್ಕೂ ಕೋವಿಡ್ ಸೋಂಕು ತಗುಲಿದೆ. ಡಿಸಿಯ 2 ವರ್ಷದ ಮಗು ಹಾಗೂ ಪತ್ನಿಗೆ ಸೋಂಕು ತಗುಲಿದೆ.
ಬೆಂಗಳೂರು (ಅ. 14): ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆವಿ ರಾಜೇಂಂದ್ರ ಕುಟುಂಬಕ್ಕೂ ಕೋವಿಡ್ ಸೋಂಕು ತಗುಲಿದೆ. ಡಿಸಿಯ 2 ವರ್ಷದ ಮಗು ಹಾಗೂ ಪತ್ನಿಗೆ ಸೋಂಕು ತಗುಲಿದೆ. ರೋಗ ಲಕ್ಷಣ ಇಲ್ಲದೇ ಇದ್ದಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕ ಸಭೆಯ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ನಿನ್ನೆ 9523 ಪಾಸಿಟೀವ್ ಕೇಸ್‌ಗಳು ಬಂದಿವೆ. ರಾಜ್ಯದಲ್ಲಿ ಏಳೂವರೆ ಲಕ್ಷದತ್ತ ಸೋಂಕಿತರ ಸಂಖ್ಯೆ ತಲುಪಿದೆ.