ತಜ್ಞರನ್ನೇ ಬೆಚ್ಚಿ ಬೀಳಿಸಿದೆ ಬೆಂಗಳೂರಿನಲ್ಲಿ ಕೋವಿಡ್‌ನಿಂದಾಗಿರುವ ಸಾವಿನ ಸಂಖ್ಯೆ!
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ಸಂಬಂಧಿ ಸಾವುಗಳು ಸೇರಿ ನಿತ್ಯ ಸರಾಸರಿ 200 ಸಾವು ಸಂಭವಿಸುತ್ತಿವೆ.
ಬೆಂಗಳೂರು (ಅ. 08): ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ಸಂಬಂಧಿ ಸಾವುಗಳು ಸೇರಿ ನಿತ್ಯ ಸರಾಸರಿ 200 ಸಾವು ಸಂಭವಿಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿತ್ಯ ಸರಾಸರಿ 24 ಸಾವು ಹೆಚ್ಚುವರಿಯಾಗಿ ಸಂಭವಿಸುತ್ತಿದೆ.
ಕೊರೊನಾ ಪೀಡಿತ ಜಿಲ್ಲೆಗಳಲ್ಲಿ ಟಫ್ ರೂಲ್ಸ್?
ಆಗಸ್ಟ್ ತಿಂಗಳಿನಲ್ಲಂತೂ ನಿತ್ಯ ಸರಾಸರಿಗಿಂತ ಬರೋಬ್ಬರಿ 128 ಮಂದಿ ಹೆಚ್ಚುವರಿಯಾಗಿ ಸಾವನ್ನಪ್ಪಿದ್ದಾರೆ. ಅರ್ಥಾತ್ ಪ್ರತಿ ಗಂಟೆಗೆ 5.3 ಮಂದಿ ಸರಾಸರಿಗಿಂತ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಅಂಕಿ- ಅಂಶ ಸ್ವತಃ ತಜ್ಞರನ್ನೇ ಬೆಚ್ಚಿ ಬೀಳಿಸಿದೆ. ನಿಜಕ್ಕೂ ಇದು ಆತಂಕಕಾರಿ ಬೆಳವಣಿಗೆ. ನಾವೆಲ್ಲರೂ ಮುಂಜಾಗ್ರತೆ ವಹಿಸಬೇಕಾಗಿರುವ ಅಗತ್ಯ ಖಂಡಿತಾ ಇದೆ.