Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಮೈಸೂರು ರಾಜಮನೆತನದ ಆನೆಗಳು ಗುಜರಾತ್‌ಗೆ ಶಿಫ್ಟ್

ಕರುನಾಡಿನಲ್ಲಿ ಕೊರೋನಾ ಮಹಾಮಾರಿ ಪರಿಣಾಮ ಮೈಸೂರಿನ ರಾಜಮನೆತನದ ಆನೆಗಳನ್ನ ಗುಜರಾತ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.

Sep 21, 2021, 5:03 PM IST

ಮೈಸೂರು, (ಸೆ.21): ಕರುನಾಡಿನಲ್ಲಿ ಕೊರೋನಾ ಮಹಾಮಾರಿ ಪರಿಣಾಮ ಮೈಸೂರಿನ ರಾಜಮನೆತನದ ಆನೆಗಳನ್ನ ಗುಜರಾತ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.

ಈ ಬಾರಿ ಮೈಸೂರು ದಸರಾಗೆ ದುಬಾರೆಯ ಮೂರು ಆನೆಗಳು ಮಾತ್ರ ಭಾಗಿ

ಹೌದು...ಮೈಸೂರು ಅರಮನೆಗೂ ಕೊರೋನಾ ಎಫ್ಟೆಕ್ಟ್ ತಟ್ಟಿದ ಹಿನ್ನೆಲೆಯಲ್ಲಿ ರಾಜಮನೆತನದ 4 ಆನೆಗಳನ್ನು ಗುಜರಾತ್‌ಗೆ ಕಳುಹಿಸಲಾಗುತ್ತಿದೆ.  30 ವರ್ಷಗಳಿಂದ ಇದ್ದ ಆನೆಗಳು ಭಾರವಾದವಾ..? ನಿರ್ವಹಣೆ ಮಾಡಲಾಗದೇ ಕೊರೋನಾ ನೆಪ ಹೇಳಲಾಗುತ್ತಿದ್ಯಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.