Asianet Suvarna News Asianet Suvarna News

ರೆಡ್‌ ಝೋನ್‌ನಲ್ಲಿರುವ ಬೆಂಗಳೂರಿಗೆ ಸಿಕ್ತು ಬಿಗ್‌ ರಿಲೀಫ್..!

ಈ ಮೊದಲು ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರಗಳನ್ನು ರೆಡ್‌ ಝೋನ್‌ಗಳಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ರೆಡ್‌ ಝೋನ್ ವ್ಯಾಪ್ತಿಗೆ ಸೇರಿಸುವ ಲೆಕ್ಕಾಚಾರದಲ್ಲಿದೆ ಸರ್ಕಾರ.  

ಬೆಂಗಳೂರು(ಮೇ.02): ಕೊರೋನಾ ವೈರಸ್‌ನಿಂದ ಕಂಗೆಟ್ಟಿರುವ ಬೆಂಗಳೂರು ಪಾಲಿಗೆ ನಿಟ್ಟುಸಿರು ಬಿಡುವಂತಹ ಸುದ್ದಿಯಿದು. ರೆಡ್‌ ಝೋನ್ ವಿಚಾರದಲ್ಲಿ ವಿಧಾನಸಭಾ ಕ್ಷೇತ್ರವಾರು ವಲಯಗಳಾಗಿ ವಿಂಗಡಣೆಯಾಗುವ ಸಾಧ್ಯತೆಯಿದೆ.

ಈ ಮೊದಲು ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರಗಳನ್ನು ರೆಡ್‌ ಝೋನ್‌ಗಳಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ರೆಡ್‌ ಝೋನ್ ವ್ಯಾಪ್ತಿಗೆ ಸೇರಿಸುವ ಲೆಕ್ಕಾಚಾರದಲ್ಲಿದೆ ಸರ್ಕಾರ.  

ಕರ್ನಾಟಕದಲ್ಲಿ ಕೊರೋನಾ ರಣಕೇಕೆ: 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಚಾಮರಾಜಪೇಟೆಯ ಪಾದರಾಯನಪುರ, ವಿಜಯಬಗರ ವ್ಯಾಪ್ತಿಗೆ ಬರುವ ಬಾಪೂಜಿ ನಗರ ಹಾಗೂ ಬೊಮ್ಮನಹಳ್ಳಿ ವ್ಯಾಪ್ತಿಗೆ ಬರುವ ಹೊಂಗಸಂದ್ರ ಇಲ್ಲಿ ಹೆಚ್ಚು ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದು ಇವುಗಳನ್ನು ಮಾತ್ರ ಲಾಕ್‌ಡೌನ್ ಮಾಡುವ ಸಾಧ್ಯತೆಯಿದೆ. ಇನ್ನುಳಿದ ಕ್ಷೇತ್ರಗಳನ್ನು ಆರೆಂಜ್ ಹಾಗೂ ಗ್ರೀನ್ ಝೋನ್‌ಗಳಾಗಿ ಘೋಷಣೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.