Asianet Suvarna News Asianet Suvarna News

ಖಾಕಿ ಪಡೆಗೂ ಹೆಚ್ಚಾಗುತ್ತಿದೆ ಕೊರೊನಾತಂಕ; 120 ಸಿಬ್ಬಂದಿಗೆ ಸೋಂಕು

Jun 26, 2020, 3:09 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಜೂ. 26): ಖಾಕಿ ಪಡೆಗೆ ಕೊರೊನಾ ಆತಂಕ ಶುರುವಾಗಿದೆ. 120  ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದ್ದು 6 ಕ್ಕೂ ಹೆಚ್ಚು ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. 

ಗೊಂದಲ ಸೃಷ್ಟಿಸಿದ ಸೋಂಕಿತನ ವಿಳಾಸ; ವಾರಿಯರ್ ಬೇಕರಿ ಮಾಲಿಕರ ಸ್ಪಷ್ಟನೆ

ಕಲಾಸಿಪಾಳ್ಯ ಬಳಿಕ ಮತ್ತೊಂದು ಠಾಣೆ ಹಾಟ್‌ಸ್ಪಾಟ್ ಆಗಿದೆ. ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಪೊಲೀಸರಿಗೆ ಸ್ವಯಂ ರಕ್ಷಣೆ ಸವಾಲಾಗಿದೆ. ಸಾರ್ವಜನಿಕರ ಬಳಿ ಹೋಗಬೇಕು, ನೇರವಾಗಿಯೇ ಮಾತನಾಡಬೇಕು, ಚೆಕ್ ಮಾಡಬೇಕು. ಇವಾಗೆಲ್ಲಾ ಸೋಂಕು ತಗುಉವ ಸಾಧ್ಯತೆ ಹೆಚ್ಚಾಗಿದೆ. ದಿನೇ ದಿನೇ ಪೊಲೀಸರಿಗೆ ಸೋಂಕು ದೃಢಪಡುತ್ತಿರುವುದು ಹೆಚ್ಚಾಗುತ್ತಿದ್ದು ಆತಂಕವೂ ಜಾಸ್ತಿಯಾಗುತ್ತಿದೆ.