ದುಬಾರಿ ದಂಡ: ದಿನಕ್ಕೆ 400 ರೂ ಸಂಬಳ, 1 ಸಾವಿರ ರೂ ಎಲ್ಲಿಂದ ಕೊಡ್ಲಿ? ಯುವತಿಯ ಅಳಲು

ಮಾಸ್ಕ್ ಹಾಕದೇ ಇರುವವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್‌ಗಳು ಫೀಲ್ಡಿಗಿಳಿದಿದ್ದಾರೆ. ಗರುಡಾ ಮಾಲ್‌ಗೆ ಮಾರ್ಷಲ್‌ಗಳು ದಿಢೀರನೇ ಭೇಟಿ ನೀಡಿ ಅಲ್ಲಿನ ಯುವತಿಯೊಬ್ಬಳಿಗೆ ಫೈನ್ ಹಾಕಲು ಮುಂದಾಗಿದ್ದಾರೆ. 

First Published Oct 7, 2020, 5:53 PM IST | Last Updated Oct 7, 2020, 5:55 PM IST

ಬೆಂಗಳೂರು (ಅ. 07): ಮಾಸ್ಕ್ ಹಾಕದೇ ಇರುವವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್‌ಗಳು ಫೀಲ್ಡಿಗಿಳಿದಿದ್ದಾರೆ. ಗರುಡಾ ಮಾಲ್‌ಗೆ ಮಾರ್ಷಲ್‌ಗಳು ದಿಢೀರನೇ ಭೇಟಿ ನೀಡಿ ಅಲ್ಲಿನ ಯುವತಿಯೊಬ್ಬಳಿಗೆ ಫೈನ್ ಹಾಕಲು ಮುಂದಾಗಿದ್ದಾರೆ. ಆಗ ಆ ಯುವತಿ, ನನ್ನ ದಿನದ ಸಂಬಳ 400 ರೂ, 1000 ರೂ ಎಲ್ಲಿಂದ ತಂದು ಕೊಡಲಿ? ನಮ್ಮನ್ನು ಬಿಟ್ಟು ಬಿಡಿ' ಎಂದು ಯುವತಿ ಅಳಲು ತೋಡಿಕೊಂಡಿದ್ಧಾರೆ. 

ಮಾರ್ಷಲ್‌ಗಳೊಂದಿಗೆ ಮಹಿಳೆಯ ಮಾಸ್ಕ್ ಫೈಟ್; ಪೊಲೀಸರು ಸುಸ್ತೋಸುಸ್ತು..!

ಮಾರ್ಷಲ್‌ಗಳ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ ತಂದು ಕೊಡುವುದು? ಎಂದು ಪ್ರಶ್ನಿಸುತ್ತಿದ್ದಾರೆ.