ಲಸಿಕೆ ಹಂಚಿಕೆಗೆ ಬಿಬಿಎಂಪಿ ಹೊಸ ಪ್ಲಾನ್, ಸ್ಟೋರೇಜ್‌ಗೆ ಹೊಸ ವ್ಯವಸ್ಥೆ

ಕೊರೊನಾ ಲಸಿಕೆ ಹಂಚಿಕೆಗೆ ಆರೋಗ್ಯ ಕೇಂದ್ರಗಳು ಸಾಕಾಗುವುದಿಲ್ಲ. ಅಲ್ಲಿ ಸಂಗ್ರಹಣೆಗೆ ಕೊಠಡಿಗಳ ಕೊರತೆ ಇದೆ ಎಂದು ಹೇಳಲಾಗುತ್ತಿತ್ತು. ಲಸಿಕೆ ಹಂಚಿಕೆಗೆ ಬಿಬಿಎಂಪಿ ಹೊಸ ಪ್ಲಾನ್ ಕಂಡು ಹಿಡಿದಿದೆ.

First Published Jan 5, 2021, 4:20 PM IST | Last Updated Jan 5, 2021, 4:20 PM IST

ಬೆಂಗಳೂರು (ಜ. 05): ಕೊರೊನಾ ಲಸಿಕೆ ಹಂಚಿಕೆಗೆ ಆರೋಗ್ಯ ಕೇಂದ್ರಗಳು ಸಾಕಾಗುವುದಿಲ್ಲ. ಅಲ್ಲಿ ಸಂಗ್ರಹಣೆಗೆ ಕೊಠಡಿಗಳ ಕೊರತೆ ಇದೆ ಎಂದು ಹೇಳಲಾಗುತ್ತಿತ್ತು. ಲಸಿಕೆ ಹಂಚಿಕೆಗೆ ಬಿಬಿಎಂಪಿ ಹೊಸ ಪ್ಲಾನ್ ಕಂಡು ಹಿಡಿದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 1506 ಜಾಗಗಳನ್ನು ಗುರುತಿಸಿದೆ. ನರ್ಸಿಂಗ್ ಹೋಮ್, ಮೆಡಿಕಲ್ ಕಾಲೇಜು, ಆಯುಶ್ ಸೆಂಟರ್,ಶಾಲೆಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. 

ಲಸಿಕೆ ನೀಡೋದ್ರಲ್ಲಿ ಭಾರತವೇ ಸಾರ್ವಭೌಮ...ಆದರೂ ಕೋಟಿ ಕೋಟಿ ಜನರಿಗೆ ಒಂದೇ ಅನುಮಾನ!

ಬೆಂಗಳೂರಿನಲ್ಲಿ ಈಗಾಗಲೇ 10 ಲಕ್ಷ ವ್ಯಾಕ್ಸಿನ್ ಸ್ಟೋರೇಜ್‌ಗೆ ಸಿದ್ಧತೆ ಪೂರ್ಣಗೊಂಡಿದೆ. ಮೊದಲೆರಡು ಹಂತದ ವಿತರಣೆಗೆ ಅಡ್ಡಿಯಿಲ್ಲ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ.