Asianet Suvarna News Asianet Suvarna News

ಕೊರೋನಾ ಅಬ್ಬರ ಒಂದೇ ದಿನ ICU ಸೇರಿದ 56 ಸೋಂಕಿತರು

ಈವರೆಗೆ ರಾಜ್ಯದಲ್ಲಿ 7213 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇನ್ನು ತೀವ್ರ ಅಸ್ವಸ್ಥರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ರಾಜ್ಯದ ಜನತೆಯಲ್ಲಿ ಇನ್ನಷ್ಟು ಭೀತಿ ಹೆಚ್ಚಾಗುವಂತೆ ಮಾಡಿದೆ. ತೀವ್ರ ಅಸ್ವಸ್ಥರ ಸಂಖ್ಯೆಯಲ್ಲಿ ಏರಿಕೆಯಿಂದಾಗಿ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುವ ಭಯ ಶುರುವಾಗಿದೆ.

First Published Jun 16, 2020, 12:28 PM IST | Last Updated Jun 16, 2020, 12:31 PM IST

ಬೆಂಗಳೂರು(ಜೂ.16): ರಾಜ್ಯದಲ್ಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ ಮಿತಿಮೀರುತ್ತಿದೆ. ಸದ್ಯ ಸೋಂಕಿತರ ಏರಿಕೆಯ ಜತೆಗೆ ತೀವ್ರ ಅಸ್ವಸ್ಥರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಈವರೆಗೆ ರಾಜ್ಯದಲ್ಲಿ 7,213 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇನ್ನು ತೀವ್ರ ಅಸ್ವಸ್ಥರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ರಾಜ್ಯದ ಜನತೆಯಲ್ಲಿ ಇನ್ನಷ್ಟು ಭೀತಿ ಹೆಚ್ಚಾಗುವಂತೆ ಮಾಡಿದೆ. ತೀವ್ರ ಅಸ್ವಸ್ಥರ ಸಂಖ್ಯೆಯಲ್ಲಿ ಏರಿಕೆಯಿಂದಾಗಿ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುವ ಭಯ ಶುರುವಾಗಿದೆ.

Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!

ರಾಜ್ಯದಲ್ಲಿ ಗಂಭೀರ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಜೂನ್ 09ಕ್ಕೆ 12 ಮಂದಿ ಐಸಿಯುನಲ್ಲಿದ್ದರು, ಇದೀಗ ಜೂನ್ 15ರ ವೇಳೆಗೆ 56ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories